ಹಾಸನ: ಹಾಸನ ಪೊಲೀಸ್ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶ್ವಾನ ರಕ್ಷಾ ಅನಾರೋಗ್ಯದಿಂದ ನಿನ್ನೆ ರಾತ್ರಿ ಮೃತಪಟ್ಟದೆ.
ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದ ರಕ್ಷಾ 200 ಕ್ಕೂ ಅಧಿಕ ಪ್ರಕರಣದಲ್ಲಿ ತನಿಖೆಗೆ ಸಹಕರಿಸಿದ್ದು, 47 ಪ್ರಕರಣದಲ್ಲಿ ಕೊಲೆ, ದರೋಡೆ ಪ್ರಕರಣಗಳನ್ನು ಪತ್ತೆ ಮಾಡಿದೆ.
ಮೃತ ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದ್ದು, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಗೌರವ ಸಮರ್ಪಣೆ ಮಾಡಿ ಅಂತ್ಯಕ್ರಿಯೆ ಮಾಡಲಾಯಿತು.
ಎಎಸ್ಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ಹಾಸನದ ಪೊಲೀಸ್ ಮೈದಾನದಲ್ಲಿ ಅಂತ್ಯಕ್ರಿಯ ಮಾಡಲಾಯಿತು.