ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯ ಕೆ.ಆರ್. ಪುರಂನ ಸೊನ್ನೆನಹಳ್ಳಿಯಲ್ಲಿ ನಡೆದಿದೆ.
ರಸ್ತೆಯಲ್ಲಿ ಕುಳಿತು ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿಯಾಗಿ ಶ್ವಾನಗಳ ಗುಂಪು ದಾಳಿ ನಡೆಸಿದೆ. ಬಾಲಕ ರಸ್ತೆಯಲ್ಲಿ ಕುಳಿತು ನಾಯಿಗೂ ಕಲ್ಲು ಹೊಡೆದಿದ್ದ ಎನ್ನಲಾಗಿದೆ. ಹೀಗಾಗಿ ನಾಯಿಗಳ ಗುಂಪು ದಾಳಿ ನಡೆಸಿವೆ ಎಂದು ತಿಳಿದು ಬಂದಿದೆ.
ಬಾಲಕನ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದಂತೆ ಆತ ಕೆಳಗೆ ಬಿದ್ದು ಕಿರುಚಾಡಿದ್ದಾನೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಓಡಿ ಹೋಗಿ ಅನಾಹುತ ತಪ್ಪಿಸಿ, ಬಾಲಕನನ್ನು ಕಾಪಾಡಿದ್ದಾರೆ. ಬಾಲನಕನ ಮೇಲೆ ಶ್ವಾನಗಳು ದಾಳಿ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.