ಬೆಂಗಳೂರು: ಲಾಲ್ ಬಾಗ್ ನಲ್ಲಿ ಬೀದಿ ನಾಯಿ ಕಾಟ ಹೆಚ್ಚಾಗುತ್ತಿದ್ದು, ನಾಯಿ ದಾಳಿಗೆ ವೃದ್ಧ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ನಾಯಿ ದಾಳಿಯಿಂದ ವಯೋ ವೃದ್ಧನ ತೋಳಿನ ಭಾಗಕ್ಕೆ ಗಾಯಗಳಾಗಿವೆ.
ಗುರುವಾರ ಲಾಲ್ ಬಾಗ್ ಗೆ ಬಂದಿದ್ದ 72 ವರ್ಷದ ವೃದ್ಧರೊಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ನಾಯಿಗಳು ದಾಳಿ ನಡೆಸಿವೆ. ಈ ವೇಳೆ ಅವರ ಬಲ ತೋಳಿನ ಭಾಗಕ್ಕೆ ಕಚ್ಚಿವೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


















