ಹುಬ್ಬಳ್ಳಿ: ಸಿಎಂ ವಿರುದ್ಧ ತನಿಖೆಗೆ ಕೋರ್ಟ್ ಸೂಚಿಸಿರುವುದನ್ನು ರಾಜಕೀಯ ತೀರ್ಪು ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅವರ ತಲೆಯಲ್ಲಿ ಕುರಿ ಮಾಂಸ ಇರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೇಳಿಕೆ ನೀಡಿರುವ ಸಚಿವ ಜಮೀರ್ ಗೆ ನ್ಯಾಯಾಂಗ ನಿಂದನೆ ಕೇಸ್ ನಲ್ಲಿ ಶಿಕ್ಷೆಯಾಗಲಿ. ನ್ಯಾಯಾಲಯದ ಬಗ್ಗ ಹೀಗೆ ಮಾತನಾಡಬಾರದು. ಒಂದೊಮ್ಮೆ ಅವರ ಸಮುದಾಯದ ಜನಸಂಖ್ಯೆ ಶೇ 40–50ಕ್ಕೆ ಹೆಚ್ಚಿದರೆ ಬಾಂಗ್ಲಾದೇಶದ ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನೇ ಓಡಿಸಿಬಿಡುತ್ತಾರೆ ಎಂದು ಗುಡುಗಿದ್ದಾರೆ.
ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ವಿಧಾನಸಭೆಯನ್ನು ವಿಸರ್ಜನೆ ಮಾಡಬೇಕು. ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ತನಿಖೆ ಎದುರಿಸುವುದು ಸೂಕ್ತವಲ್ಲ. ಅಧಿಕಾರಿಗಳು ನಿರಾತಂಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ರಾಜ್ಯಪಾಲರೂ ದಲಿತ. ಅವರಿಗೂ ರಾಜ್ಯ ಸರ್ಕಾರ ಅಪಮಾನ ಮಾಡುತ್ತಿದೆ. ಅಂದರೆ ದಲಿತರ ಬಗ್ಗೆ ಇವರಿಗೆ ಇರುವ ಕಾಳಜಿ ಎಷ್ಟು ಎಂಬುದು ತಿಳಿಯುತ್ತದೆ’ ಎಂದು ಟೀಕಿಸಿದ್ದಾರೆ.
ಯಾವುದೇ ಪಕ್ಷದಲ್ಲಿ ಭಷ್ಟರಿದ್ದರೂ ಅವರೆಲ್ಲ ಜೈಲಿಗೆ ಹೋಗಲಿ, ರಾಜ್ಯದಲ್ಲಿ ಹೊಸ ಯುಗ ಆರಂಭವಾಗಲಿ, ಹೊಂದಾಣಿಕೆ ರಾಜಕಾರಣ ಮುಕ್ತ ರಾಜ್ಯವಾಗಲಿ’ ಎಂದು ಹೇಳಿದ್ದಾರೆ.