ಯಾವುದೇ ಔತಣ ಕೂಟ ಇಲ್ಲ ಏನು ಇಲ್ಲ , ಪ್ರತಿದಿನ ಒಬ್ಬೊಬ್ಬರು ಊಟಕ್ಕೆ ಕರೆಯುತ್ತಿದ್ದಾರೆ ಬೇಡ ಅನ್ನಲು ಆಗುತ್ತಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ಬಗ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಯಾವುದೇ ಔತಣ ಕೂಟ ಇಲ್ಲ ಏನು ಇಲ್ಲ, ನಮ್ಮ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಫ್ಯಾಮಿಲಿ 15 ವರ್ಷದಿಂದ ಕರೆಯುತ್ತಿದ್ದರು. ನಾವು ಯಾರನ್ನು ಮರೆಯಲು ಆಗುವುದಿಲ್ಲ ಪ್ರತಿದಿನ ಒಬ್ಬೊಬ್ಬರು ಊಟಕ್ಕೆ ಕರೆಯುತ್ತಿದ್ದಾರೆ ಬೇಡ ಅನ್ನಲು ಆಗುತ್ತಾ, ನಾಳೆ ಆಸಿಫ್ ಶೇಟ್ ಕರೆದಿದ್ದಾರೆ.ಒಂದೊಂದು ದಿನ ಹೋಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕ್ರಿಕೆಟ್ ವಿಚಾರ
ಹೋಂ ಮಿನಿಸ್ಟರ್ ಎಲ್ಲರನ್ನು ಕರೆದು ಮಾತನಾಡುತ್ತಾರೆ. ಮುಂದೆ ಯಾವುದೇ ರೀತಿ ಅನಾಹುತಾಗದಂತೆ ಹೋಂ ಮಿನಿಸ್ಟರ್ ನೋಡಿಕೊಳ್ಳುತ್ತಾರೆ. ಗೃಹ ಸಚಿವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರೇ ನೋಡಿಕೊಳ್ಳುತ್ತಾರೆ ಬೆಂಗಳೂರು ಗೌರವವನ್ನು ನಾವು ಕಾಪಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣದ ಬಗ್ಗೆ ಚಿನ್ನಯ್ಯ ಹೇಳಿದಾಗ ಸ್ವಾಮಿಗಳು ದಂಗಾಗಿದ್ದರು..! : ಮಟ್ಟಣ್ಣನವರ್



















