ಪ್ರತಿಯೊಬ್ಬರಿಗೂ ಆಸೆ ಇರುತ್ತೆ ನಾನು ಕೂಡ ಫಿಟ್ ಆಗಿ ಇರಬೇಕು ಅಂತ, ಕೆಲವರು ದಪ್ಪ ಆಗಬೇಕು ಅಂದುಕೊಳ್ಳುತ್ತಾರೆ. ಇನ್ನೂ ಕೆಲವರು ಸಣ್ಣ ಆಗಬೇಕು ಅಂದುಕೊಳ್ಳುತ್ತಾರೆ. ಗೋಡಂಬಿ ತಿನ್ನುವುದರಿಂದ ದಪ್ಪ ಆಗ್ತಾರಾ? ಹೀಗೊಂದು ಪ್ರಶ್ನೆ, ಸಾಮಾನ್ಯವಾಗಿ ಮೂಡುತ್ತಿದೆ.
ಹೌದು! ಗೋಡಂಬಿಯಲ್ಲಿ ಹೆಚ್ಚು ಫೈಬರ್ ಇರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಫೈಬರ್ ಸಮೃದ್ಧವಾಗಿರುವ ಆಹಾರವು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಈ ಗೋಡಂಬಿ ಬೀಜಗಳನ್ನು ಮಿತವಾಗಿ ಸೇವಿಸಿದಾಗ ಮಾತ್ರ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅತಿಯಾಗಿ ತೆಗೆದುಕೊಂಡರೆ ತೂಕ ಹೆಚ್ಚಾಗುವ ಅಪಾಯವಿರುತ್ತದೆ. ಹುರಿದ ಅಥವಾ ಉಪ್ಪಿನೊಂದಿಗೆ ಬೆರೆಸಿ ತಿನ್ನುವುದರಿಂದ ತೂಕವನ್ನು ಹೆಚ್ಚಿಸಲು ಬಯಸುವವರಿಗೆ ಇದು ಒಳ್ಳೆಯದು.
ಅದೇ ತೂಕ ಹೆಚ್ಚಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಉಪ್ಪು ಇಲ್ಲದೆ ಹುರಿಯದೆ ಮಿತವಾಗಿ ತಿನ್ನುವುದು ಉತ್ತಮವಾಗಿದೆ. ಗೋಡಂಬಿಯಿಂದ ತೂಕ ಹೆಚ್ಚಿಸಿಕೊಳ್ಳುತ್ತೇವೆಯೋ? ಅಥವಾ ಕಡಿಮೆ ಮಾಡಿಕೊಳ್ಳುತ್ತೇವೆಯೋ? ಅದು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ ನಾವು ತಿನ್ನುವ ಸಮಯ ಮತ್ತು ದೈಹಿಕ ಚಟುವಟಿಕೆಯ ಮೇಲೆ ಅವಲಂಬಿಸಿರುತ್ತದೆ. ವ್ಯಾಯಾಮ ಮಾಡದೆ ನೀವು ಹೆಚ್ಚು ಗೋಡಂಬಿ ಸೇವನೆ ಮಾಡಿದರೆ ತೂಕ ಹೆಚ್ಚಾಗುತ್ತದೆ. ಅಂತೆಯೇ, ನೀವು ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮತ್ತು ಮಿತವಾಗಿ ಗೋಡಂಬಿ ಸೇವನೆ ಮಾಡಿದರೆ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.