ಬೆಂಗಳೂರು : ನಟ ಶಿವರಾಜ್ ಕುಮಾರವರ ಬದುಕಿನ ಸವಾಲುಗಳ ಕುರಿತು ಸದ್ಯ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ತಯಾರಿ ಮಾಡಲಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ನಂತರ ಸಾವನ್ನೇ ಗೆದ್ದು ಬರುವ ಹೋರಾಟವನ್ನು ಚಿತ್ರರಂಗದ ರಿಯಲ್ ಬದುಕಿನಲ್ಲಿ ಪ್ರದರ್ಶಿಸಲು ಗೀತಾ ಶಿವರಾಜ್ ಕುಮಾರ್ ಮುಂದಾಗಿದ್ದಾರೆ.

ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಸಕ್ರಿಯವಾಗಿ ನಟಿಸುತ್ತಿರುವ ಶಿವಣ್ಣ ಅವರ ಬದುಕಿನ ಹೋರಾಟವನ್ನು ಒಳಗೊಂಡ ಸರ್ವೈವರ್ ಎಂಬ ಡಾಕ್ಯೂಮೆಂಟರಿ ನಿರ್ದೇಶಕ ಪ್ರದೀಪ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

ಗಣರಾಜ್ಯೋತ್ಸವದಂದು ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನಾನು ಚಿಕಿತ್ಸೆಗೆ ಹೋಗುವಾಗ ನಿಮ್ಮ ಹಾರೈಕೆಗಳನ್ನು ಹೊತ್ತು ಸಾಗಿದ್ದೆ, ಅಲ್ಲಿದಾಗ ನಿಮ್ಮ ಪ್ರಾರ್ಥನೆಗಳನ್ನು ನೆನೆದಿದ್ದೆ. ಮರಳಿ ಬಂದಾಗ ನಿಮ್ಮ ನಗುವಿನಲ್ಲಿ ಮೆರೆದು, ನಿಮ್ಮೆಲ್ಲರೊಂದಿಗೆ ನಾನು ಗೆದ್ದು ಬಂದಿರುವ ಕಥೆ ಹೇಳಲು ಹೊರಟಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ.

ಈ ಡಾಕ್ಯೂಮೆಂಟರಿ, ಶಿವಣ್ಣ ಅವರ ವ್ಯಕ್ತಿಗತ ಹೋರಾಟ ಮತ್ತು ಬದುಕಿನ ಅಮೂಲ್ಯ ಪಾಠವನ್ನು ಸಿಂಹವೀರವಾಗಿ ಪ್ರದರ್ಶಿಸಲು ಸಜ್ಜಾಗಿದೆ.
ಇದನ್ನೂ ಓದಿ : ‘ಅಮೃತ ಅಂಜನ್’ : ಕಾಮೆಡಿ ಉತ್ಸವ..!



















