ನವದೆಹಲಿ: ವೈದ್ಯನೊಬ್ಬ ಕೊಲೆ ಮಾಡಿ, ಮೃತದೇಹದ ತುಂಡುಗಳನ್ನು ಮೊಸಳೆಗಳಿಗೆ ಹಾಕುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಸುಳಿವು ಸಿಗಬಾರದು ಎಂದು ಆ ಶವದ ತುಂಡುಗಳನ್ನು ಮೊಸಳೆಗೆ ಆಹಾರವಾಗಿ ಹಾಕುತ್ತಿದ್ದ ಸೀರಿಯಲ್ ಕಿಲ್ಲರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಜಸ್ಥಾನ ಮೂಲದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಡಾಕ್ಟರ್ ಡೆತ್ ಎಂದೇ ಹೆಸರು ಮಾಡಿದ್ದ. 67 ವರ್ಷದ ಈ ಸರಣಿ ಹಂತಕ ಆಯುರ್ವೇದ ವೈದ್ಯ ದೇವೇಂದರ್ ಶರ್ಮಾ ಎನ್ನಲಾಗಿದೆ.
ಈಗಾಗಲೇ ಈ ಸೀರಿಯಲ್ ಕಿಲ್ಲರ್ ಶಿಕ್ಷೆಗೆ ಗುರಿಯಾಗಿದ್ದಾನೆ. ಈತ ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿನಲ್ಲಿ ತಾನು ಕೊಂದವರ ದೇಹಗಳನ್ನು ಎಸೆಯುತ್ತಿದ್ದ. ಹೀಗಾಗಿ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿರಲಿಲ್ಲ ಎನ್ನಲಾಗಿದೆ.
ದೇವೇಂದರ್ ಶರ್ಮ ಭೀಕರವಾಗಿ ಕೊಲೆ ಮಾಡಿ ಮೊಸಳೆಗಳಿಗೆ ಆಹಾರವಾಗಿ ದೇಹದ ತುಂಡುಗಳನ್ನು ಎಸೆಯುತ್ತಿದ್ದ. ಕಾಸ್ಗಂಜ್ನ ಮೊಸಳೆಗಳಿಂದ ತುಂಬಿದ ಕೆರೆಯಲ್ಲಿ ಎಸೆಯುತ್ತಿದ್ದನು. ಸಾಕ್ಷ್ಯಗಳನ್ನು ನಾಶಮಾಡಲು ಆತ ಈ ವಿಧಾನ ಬಳಸುತ್ತಿದ್ದ. ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಾದ್ಯಂತ 7 ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅವನು ಗುರುಗ್ರಾಮ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ.
2002 ಮತ್ತು 2004ರ ನಡುವೆ ಟ್ಯಾಕ್ಸಿ ಮತ್ತು ಟ್ರಕ್ ಚಾಲಕರ ಕ್ರೂರ ಹತ್ಯೆಗಳಿಗಾಗಿ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಈತನ ವಿರುದ್ಧ 27 ಕೊಲೆ, ಅಪಹರಣ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಈತ ಪೆರೋಲ್ ಮೇಲೆ ಹೊರಗೆ ಬಂದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.