ಬಿಗ್ ಬಾಸ್ ರಿಯಾಲಿಟಿ ಶೋ ನೋಡೋದಕ್ಕೆ ನಾವೆಲ್ಲ ಕಾಯ್ತಾ ಇದ್ದೇವೆ. ಯಾವತ್ತು ಶೋ ಶುರುವಾಗುತ್ತೋ ಅಂತ ಕಾತುರತೆಯಿಂದ ಕಾಯ್ತಾ ಇದ್ದೇವೆ. ಕನ್ನಡದ ಬಿಗ್ ಬಾಸ್ ಇನ್ನೇನು ಕೆಲವೇ ತಿಂಗಳುಗಳಲ್ಲಿ ಶುರುವಾಗಲಿದೆ. ಈಗಾಗಲೇ ಟಾಲಿವುಡ್ ನ ಬಿಗ್ ಬಾಸ್ ಸೀಸನ್ 9 ಮತ್ತೆ ರಂಜಿಸಲು ಸಿದ್ಧವಾಗಿದೆ.
ಈ ಬಾರಿಯೂ ನಟ ನಾಗಾರ್ಜುನ ಅಕ್ಕಿನೇನಿ ಅವರೇ ಈ ಶೋ ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ಇದು ಚದುರಂಗವಲ್ಲ, ಯುದ್ಧ ಎಂದು ನಾಗಾರ್ಜುನ ಪಂಚ್ ಡೈಲಾಗ್ ಹೊಡೆದಿದ್ದಾರೆ. ಸದ್ಯ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಬಿಗ್ ಬಾಸ್ ತಂಡವು ಮತ್ತೊಮ್ಮೆ ಸಾಮಾನ್ಯ ಜನರಿಗೆ ಬಂಪರ್ ಆಫರ್ ನೀಡಿದ್ದು, ನೀವು ನಿಮ್ಮ ಬಗ್ಗೆ ಹಾಗೂ ನೀವು ಬಿಗ್ ಬಾಸ್ ಮನೆಗೆ ಯಾಕೆ ಪ್ರವೇಶಿಸಲು ಇಷ್ಟಪಡ್ತೀರಾ?
ಅನ್ನೋದರ ಕುರಿತು ಒಂದರಿಂದ ಮೂರು ನಿಮಿಷಗಳ ವಿಡಿಯೋ ಮಾಡಿ ಅಪ್‌ಲೋಡ್ ಮಾಡಬೇಕು. ಬಿಗ್ ಬಾಸ್ ತಂಡ ಇದನ್ನು ಪರಿಶೀಲಿಸಿ ಅರ್ಹ ಮತ್ತು ಸೂಕ್ತ ಜನರನ್ನು ಚೂಸ್ ಮಾಡುತ್ತೆ.