ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ 50 ಕೋಟಿ ರೂ. ಬೇಡಿಕೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆಂದು ಗಂಭೀರ ಆರೋಪ ಮಾಡಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ಕೂಡ ದೂರು ದಾಖಲಾಗಿದೆ. ಈ ವಿಷಯವಾಗಿ ಉದ್ಯಮಿ ವಿಜಯ್ ಟಾಟಾ ಮಾತನಾಡಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿ ದೂರು ದಾಖಲಾಗಿದೆ. ಎಫ್ ಐಆರ್ ದಾಖಲಾದ ನಂತರ ಅವರಿಗೆ ನಾನು ಯಾರು ಅಂತಾ ಗೊತ್ತಾಗಿದೆ. ಇಂದು ನನ್ನ ಮುಖದಲ್ಲಿ ನಗು ಇದೆ. ಖುಷಿ ಆಗುತ್ತಿದೆ. ನನ್ನ ಎಫ್ ಐಆರ್ ಆದ ಮೇಲೆ ಅವರು ದೂರು ಕೊಟ್ಟಿದ್ದಾರೆ. ಮೊದಲು ಯಾರೂ ಅಂಥ ಗೊತ್ತಿಲ್ಲ ಅಂದಿದ್ದರು. ಈಗ ಅವರಿಗೆ ನಾನು ಯಾರು ಅಂಥ ಗೊತ್ತಿದೆ ಎಂದು ಸಾಬೀತಾಯಿತು ಎಂದಿದ್ದಾರೆ.
ನಾನು ನೂರು ಕೋಟಿ ರೂಪಾಯಿ ಕೇಳಿದ್ದೀನಿ ಎಂಬ ಆರೋಪ ಮಾಡಿದ್ದಾರೆ. 100 ಕೋಟಿ ರೂ. ಕೇಳುವುದಕ್ಕೆ ಸಾಧ್ಯನಾ? ಅದು ಕೇಂದ್ರ ಸಚಿವ ಬಳಿ ಹೋಗಿ. ನಂಬುವಂತಹ ವಿಚಾರ ಹೇಳಬೇಕು. ಅದಕ್ಕೆ ಅವರು ದಾಖಲೆಗಳನ್ನು ಕೊಡಲಿ. ಅವರಿಗೆ ನಾನು ದುಡ್ಡು ಕೊಟ್ಟಿಲ್ಲ ಅನ್ನುವ ಕೋಪ ಇದೆ. ನಾನು ಜೆಡಿಎಸ್ ಕಾರ್ಯಕರ್ತ. 2019ರಲ್ಲಿ ಸಾಕಷ್ಟು ಖರ್ಚು ಮಾಡಿದ್ದೇನೆ. ಅದಕ್ಕೆ ಸಾಕ್ಷಿಗಳಿವೆ. ಸೂಪರ್ ಮಂಡ್ಯ ಅನ್ನುವ ಕ್ಯಾಂಪೇನ್ ಮಾಡಿದ್ದೀನಿ ಎಂದಿದ್ದಾರೆ. ಮನೆಗೆ ಹೋಗಿ ಊಟ ಮಾಡಿದ್ದೀನಿ ಅಂದಿದ್ದಾರೆ. ಹಾಗಿದ್ದರೆ ಗೊತ್ತಿಲ್ಲದವರ ಮನೆಗೆ ಊಟಕ್ಕೆ ಹೋಗುತ್ತಾರಾ? ಅವರು ಒಪ್ಪಿಕೊಂಡರೆ ನಾನೇ ದೂರು ಹಿಂಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.