ಬೆಂಗಳೂರು | ರಾಜ್ಯದ 2026-27ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ನಗರದ ಮೂಲಸೌಕರ್ಯ, ಆರೋಗ್ಯ, ಸಾರಿಗೆ, ಪರಿಸರ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಬೆಂಗಳೂರನ್ನು ವಿಶ್ವಮಟ್ಟದ ವಾಸಯೋಗ್ಯ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ವಿವಿಧ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.
ಪ್ರಮುಖ ಘೋಷಣೆಗಳು
• ವೃಷಭಾವತಿ ವ್ಯಾಲಿ ಸಂಸ್ಕರಣೆಯ ಮೂಲಕ 259 ಕೆರೆಗಳಿಗೆ ನೀರು ಹರಿಸುವ ಯೋಜನೆ.
• ರಾಜೀವ್ ಗಾಂಧಿ ಎದೆರೋಗಿಗಳ ಆಸ್ಪತ್ರೆ ಆವರಣದಲ್ಲಿ 1000 ಹಾಸಿಗೆಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ.
• ಗೋವಿಂದರಾಜನಗರದಲ್ಲಿ ಬಿಬಿಎಂಪಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ₹15 ಕೋಟಿ.
• ವಾಣಿವಿಲಾಸ ಆಸ್ಪತ್ರೆಯಲ್ಲಿ ₹1 ಕೋಟಿ ವೆಚ್ಚದಲ್ಲಿ IVF ಕೇಂದ್ರ ಸ್ಥಾಪನೆ.
• ವಿಕ್ಟೋರಿಯಾ ಆಸ್ಪತ್ರೆಗೆ “ಶಾಂತವೇರಿ ಗೋಪಾಲಗೌಡ ಆಸ್ಪತ್ರೆ” ಎಂದು ಮರುನಾಮಕರಣ.
• MBBS ಮತ್ತು BDS ವಿದ್ಯಾರ್ಥಿಗಳ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ₹10 ಕೋಟಿ.
• ಧೋಬಿಘಾಟ್ ಅಭಿವೃದ್ಧಿಗೆ ₹75 ಲಕ್ಷ.
• ಕೆಂಗೇರಿ ಬಳಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 2 ಎಕರೆ ಜಾಗ ಮೀಸಲು, ₹5 ಕೋಟಿ ವೆಚ್ಚ ಮೂಲಸೌಕರ್ಯ ಅಭಿವೃದ್ಧಿ.
• ಐದು ನಗರ ಪಾಲಿಕೆಗಳಿಗೆ ₹1255 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ.
• ₹1700 ಕೋಟಿ ವೆಚ್ಚದಲ್ಲಿ 158 ಕಿ.ಮೀ ವೈಟ್ ಟಾಪಿಂಗ್ ರಸ್ತೆ.
• ₹1936 ಕೋಟಿ ವೆಚ್ಚದಲ್ಲಿ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ಅಭಿವೃದ್ಧಿ.
• ₹273 ಕೋಟಿ ವೆಚ್ಚದಲ್ಲಿ ರಾಜಕಾಲುವೆಗಳ ಮೇಲ್ದರ್ಜೆ.
• ನಗರ ಅಭಿವೃದ್ಧಿಗೆ ₹7000 ಕೋಟಿ ಅನುದಾನ.
• ಮುಂದಿನ ಮೂರು ವರ್ಷಗಳಲ್ಲಿ ₹3000 ಕೋಟಿ ವೆಚ್ಚದಲ್ಲಿ 450 ಕಿ.ಮೀ ವೈಟ್ ಟಾಪಿಂಗ್, ನಗರ ಸೌಂದರ್ಯೀಕರಣ, 175 ಜಂಕ್ಷನ್‌ಗಳ ಅಭಿವೃದ್ಧಿ, 500 ಕಿ.ಮೀ ಪಾದಚಾರಿ ಮಾರ್ಗ ಮೇಲ್ದರ್ಜೆ, 100 ಸ್ಕೈವಾಕ್ ನಿರ್ಮಾಣ.
• ಔಟರ್ ರಿಂಗ್ ರೋಡ್‌ನಲ್ಲಿ ₹160 ಕೋಟಿ ವೆಚ್ಚದಲ್ಲಿ 9 ಕಿ.ಮೀ ಪಾದಚಾರಿ ಮಾರ್ಗ.
ಸಾರಿಗೆ ಮತ್ತು ಮೆಟ್ರೋ
• 42 ಕಿ.ಮೀ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಕ್ರಮ.
• ಬೆಂಗಳೂರು ಉಪನಗರ ರೈಲು ಯೋಜನೆಗೆ ₹500 ಕೋಟಿ.
• ಬಿಎಂಟಿಸಿಗೆ 4000 ಎಲೆಕ್ಟ್ರಿಕ್ ಬಸ್ ಸೇರ್ಪಡೆ.
• ಸುರಂಗ ರಸ್ತೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹17,780 ಕೋಟಿ.
• ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಟನಲ್ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ₹2250 ಕೋಟಿ.
ನೀರು ಮತ್ತು ಪರಿಸರ
• ಕಾವೇರಿ 6ನೇ ಹಂತದ ಯೋಜನೆ ಜಾರಿಗೆ ಕ್ರಮ.
• ವಿಶ್ವ ಬ್ಯಾಂಕ್ ನೆರವಿನಿಂದ ₹2000 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ.
• ವಾಯು ಗುಣಮಟ್ಟ ಸುಧಾರಿಸಲು ಕ್ರಮ.
• ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆಗೆ ಕ್ರಮ.
• ಕ್ರೀಡೆ, ತಂತ್ರಜ್ಞಾನ ಮತ್ತು ಇತರೆ ಯೋಜನೆಗಳು.
• ಆನೇಕಲ್ ಸಮೀಪ 80 ಸಾವಿರ ಆಸನಗಳ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ.
• ಬೆಂಗಳೂರಿನಲ್ಲಿ ಅತ್ಯಾಧುನಿಕ AI ಕೇಂದ್ರ ಸ್ಥಾಪನೆಗೆ ₹16 ಕೋಟಿ.
• ಆದಿನಾರಾಯಣ ಹೊಸಹಳ್ಳಿಯಲ್ಲಿ ಹೈಟೆಕ್ ವಿಜ್ಞಾನ ನಗರಕ್ಕೆ ₹233 ಕೋಟಿ.
• ಬೆಂಗಳೂರು ಹಬ್ಬ ಆಯೋಜನೆಗೆ ₹5 ಕೋಟಿ.
• ಬನ್ನೇರುಘಟ್ಟದಲ್ಲಿ ಚಿರತೆ ಪುನರ್ವಸತಿ ಕೇಂದ್ರಕ್ಕೆ ₹5 ಕೋಟಿ.
ಇತರೆ ಪ್ರಮುಖ ಯೋಜನೆಗಳು
• ಮುಖ್ಯಮಂತ್ರಿ ನಗರೋತ್ಥಾನ ಯೋಜನೆಗೆ ₹500 ಕೋಟಿ.
• ಲೋಕಭವನ ಆವರಣದಲ್ಲಿ ಆಡಳಿತಾತ್ಮಕ ಬ್ಲಾಕ್ ಹಾಗೂ ಒಳಾಂಗಣ ಕ್ರೀಡಾಂಗಣ. ನಿರ್ಮಾಣಕ್ಕೆ ₹27 ಕೋಟಿ.
• ಪೋಲಿಸಿಂಗ್ ಸವಾಲುಗಳಿಗೆ CSR ನಿಧಿ ಬಳಕೆ.
• ಕೇಂದ್ರ ಕಾರಾಗೃಹದಲ್ಲಿ ಮಾದಕ ವ್ಯಸನ ಮುಕ್ತ ಕೇಂದ್ರ ಸ್ಥಾಪನೆ.
• ಅಪಘಾತ ಬ್ಲಾಕ್ ಸ್ಪಾಟ್ ಕಡಿಮೆ ಮಾಡಲು ತಂತ್ರಜ್ಞಾನ ಬಳಕೆ.
• 25 RTO ಕಚೇರಿಗಳಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ₹10 ಕೋಟಿ.
ಇದನ್ನೂ ಓದಿ : ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಕೇರಳದ ಕಲಿ!



















