ಚಾಮರಾಜನಗರ | ಡ್ರಂಕ್ ಅಂಡ್ ಡ್ರೈವ್ ಮಾಡಿದವನಿಗೆ ಕುಡಿದು ವಾಹನ ಓಡಿಸಬೇಡಿ ಎಂದು ಉರಿ ಬಿಸಿಲಿನಲ್ಲಿ ಬೋರ್ಡ್ ಹಿಡಿದು ಜಾಗೃತಿ ಮೂಡಿಸುವ ವಿನೂತನ ಶಿಕ್ಷೆ ವಿಧಿಸಲಾಗಿದೆ.
ಹೌದು.. ಆಟೋಚಾಲಕ ರಾಜಶೇಖರ್ ಮದ್ಯಪಾನ ಮಾಡಿ ಆಟೋ ಓಡಿಸುತ್ತಿದ್ದಾಗ ಸಂಚಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ಧ. ಈತನ ವಿರುದ್ದ ಚಾಮರಾಜನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶ ಸಿ ಡಿ ಪ್ರಕಾಶ್ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಚಾಲಕರಿಗೆ ಜಾಗೃತಿ ಮೂಡಿಸೋ ಕೆಲಸ ಮಾಡಬೇಕು ಹಾಗೂ ಜಾಗೃತಿ ಮೂಡಿಸುವುದರ ಜೊತೆಗೆ ಒಂದು ಸಾವಿರ ರೂಪಾಯಿ ದಂಡ ಎಂದ ಆದೇಶಿ ನೀಡಿದ್ದಾರೆ.
ಬೆಳಿಗ್ಗೆ10 ರಿಂದ 12, ಸಂಜೆ 4 ರಿಂದ 6 ವರೆಗೆ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದರು. ಹಾಗಯೇ ಆಟೋ ಚಾಲಕ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ನ್ಯಾಯಾಧೀಶರು ನೀಡಿದ ಶಿಕ್ಷೆ ಪಾಲಿಸಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಕೆಮಿಕಲ್ ಟ್ಯಾಂಕ್ ಸ್ಫೋಟ | ಇಬ್ಬರು ಕಾರ್ಮಿಕರು ದಾರುಣ ಸಾವು



















