ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜ ರಾಜೇಶ್ವರಿನಗರ ಶೆಡ್ ನಲ್ಲಿ ಮೃಗೀಯ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ದರ್ಶನ್ ಆಂಡ್ ಗ್ಯಾಂಗ್ ಈಗಾಗಲೇ ಜೈಲು ಪಾಲಾಗಿದೆ. ಆದರೆ, ದರ್ಶನ್ ಯಾವ ರೀತಿ ಚಿತ್ರಹಿಂಸೆ ನೀಡಿದ್ದಾರೆ ಎಂಬುವುದು ಈಗ ಬಹಿರಂಗವಾಗಿದೆ.
ಚಿತ್ರಹಿಂಸೆ ನೀಡಿದ ದಿನ ಬೆಳಿಗ್ಗೆ 4:30ರ ವೇಳೆಗೆ ದರ್ಶನ್ ಶೆಡ್ ಗೆ ಹೋಗಿದ್ದಾರೆ ಎನ್ನಲಾಗುದೆ. ಅಲ್ಲಿ (arshan), 50 ನಿಮಿಷಗಳ ಕಾಲ ರೇಣುಕಾಸ್ವಾಮಿಯ ಮೇಲೆ ಕ್ರೌರ್ಯ ಮೆರೆದಿದ್ದಾರಂತೆ. ಫಿಲ್ಮೀ ಸ್ಟೈಲ್ ನಲ್ಲಿಯೇ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿದೆ ಎನ್ನಲಾಗಿದೆ. ಆತನ ಚೀರಾಟ ಯಾರಿಗೂ ಕೇಳಬಾರದೆಂದು ಶೆಡ್ ನಲ್ಲಿ ಸೀಜ್ ಮಾಡಿರುವ ಕಾರುಗಳಿಂದ ಸುತ್ತಲೂ ಕೋಟೆ ರೀತಿಯಲ್ಲಿ ಕಟ್ಟಿಕೊಂಡಿದ್ದಾರೆ. ಶೆಡ್ ನ ಒಳಗಡೆ ಕಟ್ಟಿಕೊಂಡಿದ್ದ ಕೋಟೆಯಲ್ಲಿ ನಟ ದರ್ಶನ್ ಪ್ರಕರಣದ ಎ3 ಆರೋಪಿಯಾಗಿರೋ ಪವನ್ ಕೈಗೆ ಮೊಬೈಲ್ ಕೊಟ್ಟು ಕೊಲೆಯಾಗಿರೋ ರೇಣುಕಾಸ್ವಾಮಿ ಮಾಡಿರುವ ಮೆಸೇಜ್ ಗಳನ್ನ ಓದಲು ಹೇಳಿದ್ದಾರೆ.
ಎ3 ಆರೋಪಿ ಪವನ್ ಜೋರು ಧ್ವನಿಯಲ್ಲಿ ರೇಣುಕಾಸ್ವಾಮಿ (Renukaswamy) ಮಾಡಿರುವ ಸಂದೇಶಗಳನ್ನ ಒಂದೊಂದಾಗಿ ಓದಿ ಹೇಳಿದ್ದಾನೆ. ಆ ಸಂದರ್ಭದಲ್ಲಿ ದರ್ಶನ್ ಪ್ರತಿಯೊಂದು ಸಂದೇಶಕ್ಕೂ ಒಂದೊಂದು ಪಂಚ್ ಎಂಬಂತೆ ಶೂ ಕಾಲಿನಿಂದ ಒದ್ದಿದ್ದಾರೆ. ನಂತರ ಕಾರುಗಳಿಗೆ ಹೋಗಿ ಬಡಿದು ಬೀಳುವಂತೆ ಹೊಡೆದಿದ್ದಾರೆ. ಹೀಗೆ 30 ನಿಮಿಷಗಳ ಕಾಲ ದರ್ಶನ್ ರೇಣುಕಾಸ್ವಾಮಿಯ ಮೇಲೆ ರಾಕ್ಷಸನಂತೆ ಹೊಡೆದಿದ್ದಾರೆ ಎಂದು ಆರೋಪಿಗಳೇ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆಯಂತೆ. ಈ ಕಾರಣಕ್ಕಾಗಿಯೇ ಕೇಸು ಇಷ್ಟು ಗಟ್ಟಿಯಾಗಿರೋದು. ವಿಡಿಯೋ ದಾಖಲೆ ತೋರಿಸುತ್ತಿದ್ದಂತೆಯೇ ರಾಜಕಾರಣಿಗಳು, ಅಧಿಕಾರಿಗಳು ದರ್ಶನ್ ಕಡೆ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಕೇಸು ದಿನೇ-ದಿನೇ ಪುಷ್ಟಿಗೊಳ್ಳುತ್ತಿದೆ. ಮುಂದಿನದ್ದು ಕಾಲವೇ ಉತ್ತರಿಸಲಿದೆ.