ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಕಸ ಗೂಡಿಸಲು ಪ್ರತಿ ವರ್ಷ ನೂರು ಕೋಟಿ ರೂ. ಖರ್ಚಾಗುತ್ತದೆ ಎಂದು ಬಿಬಿಎಂಪಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರಿನ ರಸ್ತೆಗಳ ಕಸ ಗೂಡಿಸುವುದಕ್ಕೆ ವರ್ಷಕ್ಕೆ 100 ಕೋಟಿ ರೂ. ಖರ್ಚಾಗುತ್ತದೆ. ಹೀಗಾಗಿ 100 ಕೋಟಿ ವೆಚ್ಚದಲ್ಲಿ ಏಳು ವರ್ಷಗಳಿಗೆ ಟೆಂಡರ್ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಕಸ ಗೂಡಿಸುವುದಕ್ಕಾಗಿ ನಾವು ಸ್ವೀಪಿಂಗ್ ಮಷಿನ್ಸ್ ತೆಗೆದುಕೊಳ್ಳುತ್ತಿಲ್ಲ. ಅವುಗಳನ್ನು ಖರೀದಿಸಿದರೆ ಯಂತ್ರಗಳ ನಿರ್ವಾಹಣೆ ಮಾಡಲು ಆಗುವುದಿಲ್ಲ. ಸ್ವೀಪಿಂಗ್ ಮಷಿನ್ ಖರೀದಿಯಲ್ಲಿ ನಮ್ಮ ಹಳೆಯ ಅನುಭವ ಸರಿ ಹೋಗಿಲ್ಲ. ಹೀಗಾಗಿ ಏಳು ವರ್ಷಕ್ಕೆ ಸ್ವೀಪಿಂಗ್ ಮಷಿನ್ ನಲ್ಲಿ ಬೆಂಗಳೂರಿನ ರಸ್ತೆಗಳ ಕಸ ನಿರ್ವಹಣೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ವರ್ಷಕ್ಕೆ100 ಕೋಟಿಯಂತೆ ಏಳು ವರ್ಷಕ್ಕೆ 700 ಕೋಟಿ ವೆಚ್ಚದ ಒಪ್ಪಂದಕ್ಕೆ ಸರ್ಕಾರದ ಅನುಮೋದನೆಗಾಗಿ ಕಳುಹಿಸಿರುವುದಾಗಿ ಹೇಳಿದ್ದಾರೆ.