ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಉಂಟಾಗಿ 11 ಜನ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಆದರೆ, ಗಾಯಗೊಂಡವರ ಸಂಖ್ಯೆಯಲ್ಲಿ ಈಗ ಗೊಂದಲ ಸೃಷ್ಟಿಯಾಗಿದೆ. ಸರ್ಕಾರ ಬೇಕಂತಲೇ ಅಂಕಿ-ಸಂಖ್ಯೆ ಕಡಿಮೆ ಹೇಳಿದೆಯೇ? ಎಂಬ ಅನುಮಾನ ಕಾಡುತ್ತಿದೆ.
ಸರ್ಕಾರದ ಅಂಕಿ-ಸಂಖ್ಯೆಯಲ್ಲಿ 45 ಜನರು ಗಾಯಗೊಂಡಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ 65 ಜನರು ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ 10 ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ 65 ಜನರು ಗಾಯಗೊಂಡಿರುವುದು ತನಿಖೆಯಿಂದ ಬಯಲಾಗಿದೆ.
65 ಮಂದಿಯಲ್ಲಿ 43 ಜನ ಗಾಯಾಳುಗಳು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 22 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಯಾವ್ಯಾವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ವೈದೇಹಿ ಆಸ್ಪತ್ರೆ – 12
ಮಣಿಪಾಲ್ – 4
ಸ್ಪರ್ಶ್ ಆಸ್ಪತ್ರೆ – 5
ಹೆಚ್ ಎಎಲ್ ಮಣಿಪಾಲ್ – 5
ಬೌರಿಂಗ್ – 7
ವಿಕ್ರಮ್ ಹಾಸ್ಪಿಟಲ್ – 1
ಪೋರ್ಟಿಸ್ ಆಸ್ಪತ್ರೆ – 2
ಅಪೋಲೋ – 1
ಸೆಂಟ್ ಫಿಲೋಮಿನೋ – 5