ಬೆಂಗಳೂರು: ಸ್ಮಗ್ಲಿಂಗ್ ಮಾಸ್ಟರ್ ಮೈಂಡ್ ರನ್ಯಾ ಈಗಾಗಲೇ ಅರೆಸ್ಟ್ ಆಗಿ, ಡಿಆರ್ ಐ ಅಧಿಕಾರಿಗಳ ವಿಚಾರಣೆ ಎದುರಿಸಿ, ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಅವರ ಕೆಲವು ವಿಚಾರಗಳು ಹೊರ ಬೀಳುತ್ತಿವೆ.
ರನ್ಯಾ ಉಕ್ಕಿನ ಕಂಪನಿಗೆ ಸರ್ಕಾರದಿಂದ 12 ಎಕರೆ ಮಂಜೂರಾಗಿದ್ದು, ರನ್ಯಾಗೆ ರಾಜಕೀಯ ನಾಯಕರ ಆಪ್ತತೆ ಹೆಚ್ಚಿದೆ ಎಂಬುವುದು ಸಾಬೀತಾಗಿದೆ. ಕೇವಲ 45 ದಿನಗಳಲ್ಲಿ ರನ್ಯಾಗೆ 12 ಎಕರೆ ಭೂಮಿಯನ್ನು ಹಿಂದಿನ ಸರ್ಕಾರ ಮಂಜೂರು ಮಾಡಿದೆಯಂತೆ.
ರನ್ಯಾ ಅರ್ಜಿ ಸಲ್ಲಿಕೆ ಮಾಡಿದ್ದ 45 ದಿನಗಳಲ್ಲೇ ಭೂಮಿ ಮಂಜೂರಾಗಿತ್ತು. Ksiroda India pvt limited ಕಂಪನಿಗೆ ಜಾಗ ಮಂಜೂರು ಮಾಡಲಾಗಿದೆ. ವರ್ಷ ವರ್ಷ ಕಳೆದರೂ KIADB ಯಿಂದ ಜಮೀನು ಮಂಜೂರಾಗುವುದಿಲ್ಲ. ಆದರೆ ರನ್ಯಾ ಕಂಪನಿಗೆ ಮಾತ್ರ 45 ದಿನಗಳಲ್ಲೇ ಜಮೀನು ಮಂಜೂರು ಆಗಿರುವುದಕ್ಕೆ ರನ್ಯಾ ರಾಜಕೀಯ ಪ್ರಭಾವ ಎಷ್ಟು ದೊಡ್ಡದಿದೆ ಎಂಬುವುದಕ್ಕೆ ನಿದರ್ಶನವಾಗಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಜನ ಸಾಮಾನ್ಯರು ಹಿಂದಿನ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.