ಬೆಂಗಳೂರು: ಹೋಟೆಲ್ ಗೆ ಹೋದಾಗ ಪೇಪರ್ ಕಪ್ ಗಳಲ್ಲಿ ಟೀ ಕುಡಿಯುತ್ತೀರಾ? ಹೀಗೆ ಚಹಾ ಹೀರೋರು ಇನ್ಮುಂದೆ ಹುಷಾರಾಗಿರಿ!
ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದು, ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಸೇರ್ಪಡೆ ಮಾಡಿರುವ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಈಗ ಚಹಾ ಕಪ್ ಬಗ್ಗೆ ಕೂಡ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಪೇಪರ್ ಗ್ಲಾಸ್ ಬಳಕೆ ಕೂಡ ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಪೇಪರ್ ಗ್ಲಾಸ್ ನಲ್ಲಿ ಟೀ ಕುಡಿಯುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪೇಪರ್ ಗ್ಲಾಸ್ ನಲ್ಲಿ ಟೀ ಕುಡಿಯುವವರು ತುಂಬಾ ಹುಷಾರಾಗಿರಬೇಕು. ಪೇಪರ್ ಗ್ಲಾಸ್ ಬಿಸಿಗೆ ಮೆಲ್ಟ್ ಆಗುವ ಕಾರಣದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಟೀ ಕಪ್ ನಲ್ಲಿನ ಮೈಕ್ರೋ ಪ್ಲಾಸ್ಟಿಕ್ ನಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಮೈಕ್ರೋ ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರವಾಗಿದೆ. ಸಾಮಾನ್ಯವಾಗಿ ಪೇಪರ್ ಗ್ಲಾಸ್ ನಲ್ಲಿ ಜಲ ನಿರೋಧಕ ಶಕ್ತಿ ಇರದ ಕಾರಣ ಮೈಕ್ರೋಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ನಮಗರಿವಿಲ್ಲದಂತೆ ಹೊಟ್ಟೆ ಸೇರುವ ಪ್ಲಾಸ್ಟಿಕ್ ಕಣಗಳು ನಿಧಾನಗತಿಯಲ್ಲಿ ಕ್ಯಾನ್ಸರ್ ಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ಚಹಾ ಕುಡಿಯುವುದನ್ನು ನಿಲ್ಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.