ಬೆಂಗಳೂರು: ಗಾಂಜಾ ಗ್ಯಾಂಗ್ ವೊಂದು ಬುದ್ದಿವಾದ ಹೇಳಿದ ವ್ಯಕ್ತಿಯೋರ್ವನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಯುವಕರ ಗ್ಯಾಂಗ್ ವೊಂದು ಗಾಂಜಾ ಸೇದಿ ಮನೆಯ ಮುಂದೆ ಓಡಾಡುತ್ತಿತ್ತು. ಈ ವೇಳೆ ಮನೆ ಮುಂದೆ ನಿಲ್ಲಬೇಡಿ ಎಂದು ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿಗಳು, ಕಿಡ್ನಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ವಾಸುದೇವ್ (38) ಎಂಬ ವ್ಯಕ್ತಿಯನ್ನು ಕಿಡ್ನಾಪ್ ಆಗಿ ಹಲ್ಲೆಗೊಳಗಾದ ವ್ಯಕ್ತಿ. ಈ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ 12.15ಕ್ಕೆ ವಾಸುದೇವ್ ಮನೆಯ ಮುಂದೆ ಗ್ಯಾಂಗ್ ಕಾದು ನಿಂತಿದೆ. ಈ ವೇಳೆ ಬೈಕ್ ನಲ್ಲಿ ಹೋಗುತ್ತಿದ್ದ ವಾಸುದೇವ್ ಅವರನ್ನು ರಸ್ತೆಯಲ್ಲಿ ಅಡ್ಡಹಾಕಿ ಡ್ರಾಪ್ ನೀಡುವಂತೆ ಕೇಳಿದ್ದಾರೆ. ಆನಂತರ ಚಾಕು ತೋರಿಸಿ ಬೆದರಿಸಿ, ಇಬ್ಬರು ಕಿಡ್ನಾಪ್ ಮಾಡಿದ್ದಾರೆ.
ಅಲ್ಲದೇ, ಗೊರಗುಂಟೆಪಾಳ್ಯದ ಬಾರ್ ಒಂದರಲ್ಲಿ ವಾಸುದೇವ್ ಬಳಿ ಹಣ ಕಿತ್ತುಕೊಂಡು ಎಣ್ಣೆ ಹೊಡೆದಿದ್ದಾರೆ. ಅಲ್ಲಿಂದ ನೆಲಮಂಗಲಕ್ಕೆ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಫೋನ್ ಪೇ ಮೂಲಕ ಹಣ ಪಡೆದು ಮತ್ತೆ ಡ್ರಿಂಕ್ಸ್ ಮಾಡಿದ್ದಾರೆ. ಬೆಳಗಿನ ಜಾವದವರೆಗೂ ಹಲ್ಲೆ ಮಾಡಿ ಗ್ಯಾಂಗ್ ಬಿಟ್ಟು ಹೋಗಿದೆ. ಒಂದು ವೇಳೆ ಈ ಕುರಿತು ಏನಾದರೂ ದೂರು ನೀಡಿದರೆ ನಿನ್ನ ಹಾಗೂ ನಿಮ್ಮ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವಾಸುದೇವ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.