ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೂದಲು ಸಂಪಾಗಿ ಬೆಳೆಯಲು ಪ್ರತಿದಿನ ಹಾರೈಕೆ ಮಾಡುವುದು ಅಗತ್ಯ. ಬದಲಾದ ಜೀವನ ಪದ್ಧತಿಯಲ್ಲಿ ಕೂದಲನ್ನು ಹೇಗೆ ಸಂರಕ್ಷಣೆ ಮಾಡಬೇಕು? ಜೊತೆಗೆ ಕೂದಲಿಗೆ ಏನು ಬೇಕು? ಎಂದು ತಿಳಿದುಕೊಳ್ಳುವುದು ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ತಲೆ ಹೊಟ್ಟು ಮತ್ತು ತುರಿಕೆ ಸಾಮಾನ್ಯವಾಗಿದೆ. ಇದು ಕೂದಲಿಗೆ ಸಾಕಷ್ಟು ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.

ಒಳ್ಳೆಯ ಶಾಂಪೂ ಬಳಸಿ!
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಶಾಂಪುಗಳು ಲಭ್ಯವಿರುತ್ತವೆ. ಅದರಲ್ಲಿ ನಿಮ್ಮ ಕೂದಲಿಗೆ ಯಾವುದು ಸೂಕ್ತ ಎನಿಸುತ್ತೋ? ಅದನ್ನು ಖರೀದಿಸಿ ಜೊತೆಗೆ ಡ್ರೈ ಹೇರ್ ನವರು ಶಾಂಪು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಹುಷಾರಾಗಿರಬೇಕು. ಕೂದಲಿನಲ್ಲಿ ಎಣ್ಣೆಯ ಅಂಶ ಉಳಿಯುವ ರೀತಿಯಾದಂತಹ ಶಾಂಪುಗಳನ್ನು ಬಳಸಬೇಕು ಇಲ್ಲವಾದಲ್ಲಿ ತಲೆ ಕೂದಲು ಹೆಚ್ಚಾಗಿ ಡ್ರೈ ಆಗಿ ನೋಡೋಕೆ ಸುಂದರವಾಗಿ ಕಾಣಿಸುವುದಿಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ.
ಸ್ನಾನಕ್ಕೆ ಒಂದು ಗಂಟೆ ಮುಂಚೆ ಎಣ್ಣೆ ಹಚ್ಚಿ!
ತಲೆ ಸ್ನಾನ ಮಾಡುವ ಮುಂಚೆ ಒಂದು ಗಂಟೆ ಹಿಂದೆ ಎಣ್ಣೆಯನ್ನು ಹಚ್ಚಿ ಬುಡದಿಂದ ಮಸಾಜ್ ಮಾಡುವುದು ಒಳ್ಳೆಯದು. ರಾತ್ರಿ ಪೂರ್ತಿ ಎಣ್ಣೆಯನ್ನು ಹಚ್ಚಿ ಮಲಗುವುದು ಅಷ್ಟು ಸೂಕ್ತವಲ್ಲ. ಇದರಿಂದ ತಲೆ ಹೊಟ್ಟು ಹೆಚ್ಚಾಗುತ್ತದೆ. ತಲೆ ಕೂದಲು ಉದುರುವುದು ಕೂಡ ಜಾಸ್ತಿಯಾಗುತ್ತದೆ ಎನ್ನುತ್ತಾರೆ ತಜ್ಞರು.
ಜಾಸ್ತಿಯಾಗಿ ಬಿಸಿ ನೀರು ಬಳಕೆ ಬೇಡ!
ತಲೆ ಸ್ನಾನ ಮಾಡುವಾಗ ಸಾಕಷ್ಟು ಜನ ಅತಿಯಾಗಿ ಬಿಸಿ ನೀರನ್ನು ಬಳಸುತ್ತಾರೆ. ಇದು ಅಷ್ಟು ಕೂದಲಿಗೆ ಒಳ್ಳೆಯದಲ್ಲ. ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಿದರೆ, ತಲೆ ಹೊಟ್ಟು ಬರುವುದಿಲ್ಲ. ಕೂದಲು ಕೂಡ ಉದುರುವುದಿಲ್ಲ. ಹೀಗಾಗಿ, ನೀರಿನ ಬಳಕೆ ಮಾಡುವ ವಿಚಾರವಾಗಿ ಸ್ಪೆಷಲ್ ಗಮನಹರಿಸುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಹೇರ್ ಸ್ಟ್ರೈಟಿಂಗ್ ಬಳಕೆ ಕಡಿಮೆಗೊಳಿಸಿ!
ಹೆಣ್ಣು ಮಕ್ಕಳು ತಮ್ಮ ಕೂದಲನ್ನು ಗುಂಗುರು ಮಾಡುವುದಕ್ಕೆ ಅಥವಾ ವಿಭಿನ್ನ ಕೂದಲ ಶೈಲಿಗಾಗಿ ಉಪಕರಣಗಳನ್ನು ಬಳಸಿ ಕೂದಲನ್ನು ಸುಂದರಗೊಳಿಸುತ್ತೇವೆ. ಇದರಿಂದ ಬಿಸಿಯಾಗಿ ಕೂದಲು ಉದುರುತ್ತದೆ ಜೊತೆಗೆ ಮೇದು ಗ್ರಂಥಿಗಳ ಶ್ರಾವತ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ. ನೆತ್ತಿಯ ಸಮಸ್ಯೆಗೆ ಪ್ರಮುಖ ಕಾರಣ ಕೂಡ ಆಗುತ್ತದೆ. ಹೀಗೆ ಕೂದಲನ್ನು ಸುರಕ್ಷಿತವಾಗಿ ಇಡುವುದು ಬಹಳ ಮುಖ್ಯ ಎಂಬುವುದು ತಜ್ಞರ ಅಭಿಪ್ರಾಯ.
ಇಲ್ಲಿ ನಾವು ಹೇಳಿರುವ ವಿಷಯವೇ ಸತ್ಯ ಅಂತಿಲ್ಲ. ನಿಮ್ಮ ಕೂದಲ ಆರೈಕೆಯನ್ನು ನೀವು ವೈದ್ಯರ ಸಲಹೆ ಮೇರೆಗೆ ಮಾಡಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ನೀವು ನಿರ್ಧಾರ ತೆಗೆದುಕೊಳ್ಳಿ ಎನ್ನುವುದು ನಮ್ಮ ಸಲಹೆ.