ಬೆಂಗಳೂರು: ದೇಶದ ಬಹುತೇಕ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ತೆರೆದರೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ. ಖಾತೆಯಲ್ಲಿ ಮಿಮಿಮಮ್ ಬ್ಯಾಲೆನ್ಸ್ (Minimum Balance) ಇರದಿದ್ದರೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ರೀತಿಯ ಮಿನಿಮಮ್ ಬ್ಯಾಲೆನ್ಸ್ ಮಿತಿ ಇರುತ್ತದೆ. ಹಾಗೆ ನೋಡಿದರೆ, ದೇಶದಲ್ಲಿ ಎಸ್ ಬಿಐ ಹೊರತುಪಡಿಸಿ ಬಹುತೇಕ ಬ್ಯಾಂಕ್ ಗಳು ಕನಿಷ್ಠ ಬ್ಯಾಲೆನ್ಸ್ ನಿರ್ವಹಣಾ ಮೊತ್ತವನ್ನು ನಿಗದಿಪಡಿಸಿವೆ.
ಒಂದು ತಿಂಗಳ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಕಾಯ್ದುಕೊಳ್ಳಬೇಕಿರುವ ಸರಾಸರಿ ಕನಿಷ್ಠ ಮೊತ್ತವೇ ಮಾಸಿಕ ಸರಾಸರಿ ಬ್ಯಾಲೆನ್ಸ್. ಇದನ್ನೇ ಮಿನಿಮಂ ಆ್ಯವರೇಜ್ ಬ್ಯಾಲೆನ್ಸ್ ಎಂದು ಕೂಡ ಕರೆಯಲಾಗುತ್ತದೆ.ಯಾವ ಬ್ಯಾಂಕ್, ಯಾವ ರೀತಿಯ ಬ್ಯಾಂಕ್ ಖಾತೆ ಮತ್ತು ಯಾವ ಪ್ರದೇಶದಲ್ಲಿ ಬ್ಯಾಂಕ್ ಖಾತೆ ಇದೆ ಎನ್ನುವುದರ ಆಧಾರದ ಮೇಲೆ ಈ ಸರಾಸರಿ ಮೊತ್ತದಲ್ಲಿ ಬದಲಾವಣೆ ಇರುತ್ತದೆ.
ಉದಾಹರಣೆಗೆ ಮಹಾನಗರಗಳಲ್ಲಿ (ಮೆಟ್ರೊ) ಎಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆ ತೆರೆದರೆ 12 ಸಾವಿರ ರೂ. ಸರಾಸರಿ ಮೊತ್ತ ಕಾಯ್ದುಕೊಳ್ಳಬೇಕಾಗುತ್ತದೆ. ನಗರ ಪ್ರದೇಶದಲ್ಲಿ ಈ ಖಾತೆ ಆರಂಭಿಸಿದರೆ ಮಾಸಿಕ 5 ಸಾವಿರ ರೂ. ಕಾಯ್ದುಕೊಳ್ಳಬೇಕಾಗುತ್ತದೆ. ಇದೇ ಖಾತೆಯನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆದರೆ 2,500 ರೂ. ಬ್ಯಾಲೆನ್ಸ್ ಇಟ್ಟುಕೊಂಡಿರಬೇಕಾಗುತ್ತದೆ. ಒಂದೊಂದು ಬ್ಯಾಂಕುಗಳು ಒಂದೊಂದು ರೀತಿಯ ಕನಿಷ್ಠ ನಿರ್ವಹಣಾ ಮೊತ್ತವನ್ನು ನಿಗದಿಪಡಿಸಿರುತ್ತವೆ.
ಪ್ರಮುಖ ಬ್ಯಾಂಕುಗಳ ಮಿಮಿಮಮ್ ಬ್ಯಾಲೆನ್ಸ್ ಪಟ್ಟಿ
• ಎಚ್ ಡಿಎಫ್ ಸಿ
ಗ್ರಾಮ: 2,500 ರೂ.
ಪಟ್ಟಣ: 5 ಸಾವಿರ ರೂ.
ಮಹಾನಗರ: 10 ಸಾವಿರ ರೂ.
• ಐಸಿಐಸಿಐ
ಗ್ರಾಮ: 1,000 ರೂ.
ಪಟ್ಟಣ: 5 ಸಾವಿರ ರೂ.
ಮಹಾನಗರ: 10 ಸಾವಿರ ರೂ.
• ಬ್ಯಾಂಕ್ ಆಫ್ ಬರೋಡಾ
ಗ್ರಾಮ: 500 ರೂ.
ಪಟ್ಟಣ: 1 ಸಾವಿರ ರೂ.
ಮಹಾನಗರ: 2 ಸಾವಿರ ರೂ.
• ಐಸಿಐಸಿಐ
ಗ್ರಾಮ: 2,500 ರೂ.
ಪಟ್ಟಣ: 5 ಸಾವಿರ ರೂ.
ಮಹಾನಗರ: 10 ಸಾವಿರ ರೂ.