ಈ ಜಗತ್ತಿನಲ್ಲಿ ಒಬ್ಬೊಬ್ಬರದು ಒಂದೊoದು ರೀತಿ ಆಹಾರ ಪದ್ಧತಿ ಇದೆ. ನಮ್ಮ ಭಾರತೀಯರದ್ದೆ ಒಂತರ ಆಹಾರ ಪದ್ಧತಿ. ಆದರೆ ವಿದೇಶಿಗರದ್ದು ಇನ್ನೊಂದು ರೀತಿಯ ಆಹಾರ ಪದ್ಧತಿ ಇರುತ್ತೆ. ಅದರಲ್ಲೂ ಚೀನಾದವರ ಆಹಾರ ಪದ್ಧತಿಯನ್ನು ನೋಡಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳಿಟ್ಟುಕೊಳ್ತೀರಿ. ಈ ಚೀನಾದವರು ಕ್ರಿಮಿ ಕೀಟ, ಕಪ್ಪೆ ಜಿರಳೆಯನ್ನು ಬಾಯಿ ಚಪ್ಪರಿಸಿಕೊಂಡು ಸವಿಯುವ ವಿಡಿಯೋವನ್ನು ನಾವು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀವಿ. ಆದರೆ ಇದೀಗ ಚೀನಾದ ರೆಸ್ಟೋರೆಂಟ್ ವೊಂದರಲ್ಲಿ ಆನೆ ಲದ್ದಿಯಿಂದ ಸ್ವೀಟ್ ತಯಾರಿಸಲಾಗಿರುವುದು ವರದಿಯಾಗಿದೆ.
ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಫುಡ್ ಬ್ಲಾಗರ್ ಒಬ್ಬರು ಈ ರೆಸ್ಟೋರೆಂಟ್ ನಲ್ಲಿ ಆಹಾರ ಸವಿದ ಬಳಿಕ ಈ ಸ್ಪೆಷಲ್ ಸ್ವೀಟ್ ರೆಸಿಪಿ ಬಗ್ಗೆ ತಿಳಿಸಿದ್ದು, ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸ್ವೀಟ್ ರೆಸಿಪಿಗೆ ಎಲಿಫೆಂಟ್ ಡಂಗ್ ಡೆಸರ್ಟ್ ಎಂದು ಹೇಳಿದ್ದಾರೆ. ನಮಗೆಲ್ಲರಿಗೂ ಆನೆ ಲದ್ದಿ ಹೇಳಿದರೆ ವಾಕರಿಕೆ ಬರುತ್ತದೆ. ಆದರೆ ಈ ಆನೆಯ ಲದ್ದಿಯನ್ನು ಬಿಸಿಲಿನಲ್ಲಿ ಒಣಗಿಸಿ, ಅದಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಆ ಬಳಿಕ ಗಿಡಮೂಲಿಕೆಗಳು ಮತ್ತು ಜೇನು ತುಪ್ಪದ ಬೆರೆಸಿ ಸ್ವೀಟ್ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಅದಲ್ಲದೇ ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸಿಹಿ ತಿಂಡಿಯ ಬೆಲೆ 45,400 ರೂ. ಅಂತೆ. ಇದನ್ನು ಕೇಳಿ ಜನ ಆಶ್ಚರ್ಯ ಪಡುತ್ತಿದ್ದಾರೆ.