ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ನಡುವಿನ ವಾಗ್ಯುದ್ಧ ಆಸ್ತಿ ಲೆಕ್ಕದ ವಿಷಯಕ್ಕೆ ಬಂದು ನಿಂತಿದೆ. ಇಂದು ಕೂಡ ಡಿಸಿಎಂ ಡಿ.ಕೆ. ಶಿವಕುಮಾರ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಮೈಸೂರು ಚಲೋ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಶಿವಕುಮಾರ್ ಅಕ್ರಮ ಆಸ್ತಿ ಗಳಿಸಿದ್ದಾರೆ. ಅವರು ಆಸ್ತಿ ಲೆಕ್ಕ ಕೊಡಲಿ. ನಾವು ಪ್ರತಿಭಟನೆಯ ಮೂಲಕ ನಿಮ್ಮ ಎಲ್ಲ ಅಕ್ರಮಗಳ ಲೆಕ್ಕ ಚುಕ್ತಾ ಮಾಡುತ್ತೇವೆ ಎಂದು ಹೇಳಿದ್ದರು.
ಇದಕ್ಕೆ ಉತ್ತರಿಸಿರುವ ಡಿಕೆಶಿ, ನನ್ನ ಲೆಕ್ಕ ಕೊಡ್ತೇನಿ. ನಿನ್ನ ಸಹೋದರನ ಆಸ್ತಿ ಲೆಕ್ಕ ಕೊಡು. ನಿನ್ನ ಅಧಿಕಾರ ಹೇಗೆ ದುರುಪಯೋಗ ಆಯ್ತು? ಆ ಕುರಿತು ಮೊದಲು ಲೆಕ್ಕ ಕೊಡು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದಿಂದ ಏಕೆ ಹಣ ಬಿಡುಗಡೆ ಮಾಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗ ಇಬ್ಬರ ವಾಕ್ಸಮರ ಆಸ್ತಿ ವಿಚಾರಕ್ಕೆ ತಿರುಗಿದೆ. ಇಬ್ಬರೂ ಆಸ್ತಿ ಲೆಕ್ಕ ಕೊಡುವಂತೆ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರು ವಿಧವೆಯರನ್ನು ಬೆದರಿಸಿ ಆಸ್ತಿ ಬರೆಸಿಕೊಂಡಿದ್ದಾರೆ. ನಿವೃತ್ತ ಯೋಧನ ಪುತ್ರಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಈಗ ಡಿಕೆಶಿ ಏಕವಚನದಲ್ಲಿಯೇ ಕುಮಾರಸ್ವಾಮಿ ಹಾಗೂ ಸಹೋದರನ ಆಸ್ತಿಯ ಲೆಕ್ಕ ಕೇಳಿದ್ದಾರೆ.