ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತೊಮ್ಮೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಿರುದ್ಧ ಗುಡುಗಿದ್ದಾರೆ. ಕುಮಾರಸ್ವಾಮಿ ಮರ್ಯಾದೆಯಿಂದ ಇದ್ದರೆ ಅವರಿಗೂ ಕ್ಷೇಮ ಎಂದು ವಾರ್ನಿಂಗ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹದಿನೈದು- ಇಪತ್ತು ವರ್ಷದಿಂದ ಹಿರೇಮಠ ನನ್ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ. ಕುಮಾರಸ್ವಾಮಿ ಯಾಕೆ ಗಾಬರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅವರ ಡಿಎನ್‌ಎನಲ್ಲಿ ದ್ವೇಷ ರಾಜಕಾರಣ ಇದೆ. ಮೈಸೂರಲ್ಲಿ ಏನ್ ಏನ್ ಮಾತಾಡಿದ್ರು. ಅವರ ತಂದೆ ಏನ್ ಏನ್ ಮಾತಾಡಿದ್ರು. ನನ್ಮೇಲೆ ಏನ್ ಏನ್ ಕೇಸ್ ಹಾಕಿಸಿದ್ರು ಗೊತ್ತಿದೆ. ನಮಗೂ ಬಳ್ಳಾರಿಗೂ ಸಂಬಂಧವೇ ಇಲ್ಲ, ಆಗ ಹಾಕಿಸಿದ್ದು ದ್ವೇಷ ಅಲ್ವಾ? ಕುಮಾರಸ್ವಾಮಿ ಮರ್ಯಾದೆಯಿಂದ ಇದ್ದರೆ ಕ್ಷೇಮ ಎಂದು ಎಚ್ಚರಿಕೆ ನೀಡಿದ್ದಾರೆ.