ವಿವಾದಾತ್ಮಕ ಹೇಮಾವತಿ ಲಿಂಕ್ ಕೆನಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಹೇಮಾವತಿ ವಿಚಾರದಲ್ಲಿ ನಾವು ಗೌರವ ನೀಡಿ ಶಾಸಕರ ಜೊತೆ ಸಭೆ ಮಾಡಿದ್ದೇವು. ಟೆಕ್ನಿಕಲ್ ರಿಪೋರ್ಟ್ ಆದ ಮೇಲೆ ಪ್ರತಿಭಟನೆ ಮಾಡಿದ್ದಾರೆ. ಅವರು ಏನು ಮಾಡುತ್ತಿದ್ದಾರೆ? ಅಂತ ನನಗೆ ಗೊತ್ತು. ಇದು ಸರ್ಕಾರದ ನಿಲುವು. ಅವರು ಒಪನ್ ಆಗಿ ತೆಗೆದುಕೊಂಡು ಹೋಗಿ ಪೈಪ್ ಹಾಕಬೇಡಿ ಎಂದು ಹೇಳಿದ್ದಾರೆ. ಅದು ಸರ್ಕಾರದ ತೀರ್ಮಾನ. ಅವರು ಎಷ್ಟು ಖರ್ಚು ಮಾಡುತ್ತಿದ್ದಾರೆ ಅಂತ ನೋಡಲಿ ಎಂದು ಡಿಕೆಶಿ ಹೇಳಿದ್ದಾರೆ.