ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಬೀದಿ ಬದಿ ವ್ಯಾಪಾರಸ್ಥರಿಗೆ ಶಾಕ್ ನೀಡಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು. ಇಲ್ಲವಾದರೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಆದೇಶ ಹೊರಡಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ರಿಜಿಸ್ಟರ್ ಮಾಡಿಸಬೇಕು. ಫುಟ್ ಪಾತ್ ವ್ಯಾಪಾರಿಗಳ ಮಾಹಿತಿ ನಮ್ಮ ಬಳಿ ಇದೆ. ಏಪ್ರಿಲ್ 30ರ ವರೆಗೂ ಸಮಯ ಕೊಡುತ್ತೇವೆ. ರಿಜಿಸ್ಟರ್ ಆಗದ ಫುಟ್ ಪಾತ್ ಅಂಗಡಿ ತೆರವು ಮಾಡುತ್ತೇವೆ. ರಿಜಿಸ್ಟರ್ ಆದವರಿಗೆ ತಳ್ಳುವ ಗಾಡಿ ಕೊಡ್ತೀವಿ. ಅವರು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಮಾರಾಟ ಮಾಡಿಕೊಳ್ಳಬಹುದು. ಪೊಲೀಸರು, ರೌಡಿಗಳ ತೊಂದರೆ ಇದೆ ಅಂತ ದೂರು ಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಪ್ಪಿಸುತ್ತೇವೆ ಎಂದು ಹೇಳಿದ್ದಾರೆ.