ಹುಬ್ಬಳ್ಳಿ: ಡಿ.ಕೆ. ಶಿವಕುಮಾರ್ ಸಿಎಂ ಆಗೆಯೇ ಆಗುತ್ತಾರೆ. ಅದು ನಾಳೆನೇ ಕಾಲ ಬರಬಹುದು. ಇದೇ ಅವಧಿಯಲ್ಲಿ ಸಿಎಂ ಆಗುತ್ತಾರೆ ಎಂದು ನಗರದಲ್ಲಿ ಭೈರವಿ ಅಮ್ಮ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಾತು ಯಾವತ್ತೂ ಸುಳ್ಳ ಆಗಲ್ಲ. ನನ್ನ ಮಾತು ಇಲ್ಲಿಯವರೆಗೆ ಸುಳ್ಳು ಆಗಿಲ್ಲ. ಸುಳ್ಳು ಆಗುವುದೂ ಇಲ್ಲ. ಡಿಕೆಶಿ ನನಗೆ ಆಹ್ವಾನ ನೀಡಿದ್ದರು. ನಾನು ಮೂರು ವರ್ಷದ ಹಿಂದೆ ಡಿಕೆಶಿ ಮನೆಗೆ ಹೋಗಿದ್ದೆ. ಮುಂದೆ ಏನಾಗುತ್ತೆ ಅಂತಾ ಕೇಳಿದರು. ನಾನು ಆಗ ಭವಿಷ್ಯ ನುಡಿದಿದ್ದೆ. ಮುಂದಿನ ಕಥೆ ಏನು ಅಂತಾ ಕೇಳಿದ್ದರು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ ಹೇಳಿದ್ದೆ. ನೀನು ದುಡಿದ ದುಡ್ಡು, ಇನ್ಯಾವನೋ ತಿಂದು ದುಂಡಗಾಗ್ತಾನೆ ಅನ್ನೋದು ಅದರ ಅರ್ಥ. ಸತ್ಯ ಆಯ್ತೋ ಇಲ್ವೋ? ಎಂದು ಪ್ರಶ್ನಿಸಿದ್ದಾರೆ.
ನಾನು ವಿನಯ್ ಕುಲಕರ್ಣಿ ಮನೆಗೆ ಹೋಗಿ ಶಾಸಕ ಆಗ್ತಾನೆ ಅಂದಿದ್ದೆ. ನನ್ನ ಮಾತು ಸುಳ್ಳು ಆಗಲ್ಲ. ಸಿಎಂ ಬದಲಾವಣೆ ಅಲ್ಲ. ಆ ಸೀಟ್ ನಲ್ಲಿ ಡಿಕೆಶಿ ಕೂಡಬೇಕಿತ್ತು. ಇದೇ ಅವಧಿಯಲ್ಲಿ ಸಿಎಂ ಆಗುತ್ತಾರೆ. ಅವರು ಒಂದು ಅವಧಿಗೆ ಆಗಲಿ ಸಾಕು ಎಂದಿದ್ದಾರೆ.