ಚಾಮರಾಜನಗರ : ಮಹಾಶಿವರಾತ್ರಿ ಪ್ರಯುಕ್ತ ಡಿಕೆಶಿ ಪತ್ನಿ ಉಷಾ ಶಿವಕುಮಾರ್ ಮಲೆ ಮಹದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಉಷಾ ಶಿವಕುಮಾರ್, ಮಾದಪ್ಪನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಹಾಶಿವರಾತ್ರಿ ದಿನ ನಡೆದ ಈ ಭೇಟಿಯ ವೇಳೆ ರಾಜ್ಯ ರಾಜಕೀಯದಲ್ಲಿ ಸಿಎಂ ವಿಚಾರವಾಗಿ ಚರ್ಚೆಗಳು ಜೋರಾಗಿರುವ ನಡುವೆ ಡಿಕೆಶಿ ಕುಟುಂಬದಿಂದ ದೇವರ ದರ್ಶನ ರಾಜಕೀಯ ವಲಯದಲ್ಲಿ ಗಮನಸೆಳೆದಿದೆ.

ಮಲೆ ಮಹದೇಶ್ವರ ದರ್ಶನದ ನಂತರ ಉಷಾ ಶಿವಕುಮಾರ್ ಸಾಲೂರು ಮಠಕ್ಕೂ ಭೇಟಿ ನೀಡಿ ಸಾಲೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಸಾಲೂರು ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿದ್ದಾರೆ. ಈ ವೇಳೆ ಕನಕಪುರ ಭಾಗದ ಮುಖಂಡರು ಸಹ ಭಾಗಿಯಾಗಿದ್ದರು.

ಇದನ್ನೂ ಓದಿ : ಮದುವೆ ಸಂಭ್ರಮದ ನಡುವೆ ಕಳ್ಳತನ | ಫೋಟೋಶೂಟ್ ವೇಳೆ ವಧುವಿನ ಬ್ಯಾಗ್ ಎಗರಿಸಿದ ಖದೀಮ!



















