ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್, ಕೊತ್ವಾಲ್ ರಾಮಚಂದ್ರ ಅವರ ಶಿಷ್ಯ ಎಂದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದೇವೇಗೌಡರು ಹಿರಿಯರು, ನಾವು ಅವರ ವಯಸ್ಸಿಗೆ ಹಿರಿತನಕ್ಕೆ ಗೌರವ ಕೊಡುತ್ತೇವೆ. ಆದರೆ ಅವರ ವಿರುದ್ಧ ಮಾತನಾಡಬೇಕೆಂದರೂ ಮಾತನಾಡುತ್ತೇವೆ. ಅವರು ದೊಡ್ಡವರಂತೆ ನಡೆದುಕೊಳ್ಳುವುದು ಉತ್ತಮ ಎಂದಿದ್ದಾರೆ.
ನಾನು ಹಾಗೂ ಡಿಕೆ ಶಿವಕುಮಾರ್ ಅವರು ಅಪೂರ್ವ ಸಹೋದರೇ. ಹಾಗಾದರೆ ದೇವೇಗೌಡರ ಕುಟುಂಬವನ್ನು ಏನನ್ನಬೇಕು? ದೇವೇಗೌಡರ ಅಪೂರ್ವ ಕುಟುಂಬ ಅನ್ನೋದಾ? ಅಪೂರ್ವ ಮಕ್ಕಳು ಮೊಮ್ಮಕ್ಕಳು ಅನ್ನೋದಾ? ಕುಮಾರಸ್ವಾಮಿ ಅವರ ಅಪೂರ್ವ ಸಹೋದರರು ಅನ್ನುವುದೇ ಎಂದು ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಅವರ ಮೊಮ್ಮಕ್ಕಳು ಮಾಡಿದ್ರಲ್ಲಾ? ಹಾಗಾದರೆ ಅವರನ್ನು ಅಪೂರ್ವ ಮೊಮ್ಮಕ್ಕಳು ಅನ್ನೋದಾ? ಅಥವಾ ದೇವೇಗೌಡರ ವಂಶ ಅನ್ನುವುದೇ? ಹಾಗೆನಾ ಎಂದು ವ್ಯಂಗ್ಯವಾಡಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆಯಾಗಲಿ, ಬೇರೆ ಗ್ಯಾರಂಟಿ ಯೋಜನೆಗಳಾಗಲಿ ಅದರ ಬಗ್ಗೆ ಕಸಿವಿಸಿಯಾಗಿದೆ. ನೇರವಾಗಿ ಹೇಳಲಿ ಗ್ಯಾರಂಟಿ ನಿಲ್ಲಿಸಿ ಎಂದು. ನಮ್ಮ ಗ್ಯಾರಂಟಿ ಯೋಜನೆ ಕಾಂಗ್ರೆಸ್ ಸರ್ಕಾರ ಇರೋವರೆಗೂ ನಿಲ್ಲಿಸಲ್ಲ. ಇದರ ಬಗ್ಗೆ ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಹೇಳಿದ್ದಾರೆ.