ದೆಹಲಿ ಪ್ರವಾಸದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್, ಇಲ್ಲಿನ ಸಿಎಂ ಸೂಟ್ ನಲ್ಲಿ ತಮ್ಮ ವಾಸ್ತವ್ಯ ಹೂಡಿದ್ದಾರೆ. ಹೌದು, ಇದೇನಪ್ಪಾ ಸಿಎಂ ಸೂಟ್ ಅಂದ್ರಾ, ದೆಹಲಿಯ ಚಾಣಕ್ಯಪುರಿಯಲ್ಲಿ ರಾಜ್ಯ ಸರ್ಕಾರ ನೂತನ ಕರ್ನಾಟಕ ಭವನ ಕಾವೇರಿಯನ್ನು ನಿರ್ಮಿಸಿದೆ.
ಈ ಭವನದಲ್ಲಿ ರಾಜ್ಯದ ಮುಖ್ಯಮಂತ್ರಿ ವಾಸ್ತವ್ಯಕ್ಕಾಗಿಯೇ ವಿಶೇಷ ಕೊಠಡಿಯನ್ನು ರೂಪಿಸಲಾಗಿದೆ. ಆದ್ರೆ ಈ ಕೊಠಡಿಯಲ್ಲೀಗ ಡಿಕೆ ಶಿವಕುಮಾರ್ ವಾಸ್ತವ್ಯ ಹೂಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಹಾಗಂತಾ ಖುದ್ದು ಸಿಎಂ ಸಿದ್ದರಾಮಯ್ಯರ ಅನುಮತಿ ಪಡೆದೇ ಡಿಕೆಶಿ ಈ ಸೂಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು ವಿಶೇಷ ಎನ್ನುವಂತೆ, ನಿನ್ನೆ ತಮ್ಮ ಕೊಠಡಿಗೆ ಖ್ಯಾತ ವಾಸ್ತುತಜ್ಞರನ್ನು ಕರೆಸಿಕೊಂಡಿದ್ದ ಡಿಕೆ ಶಿವಕುಮಾರ್, ಕೆಲ ಸಲಹೆಗಳನ್ನು ಪಡೆದಿದ್ದಾರೆ. ಅವರ ಸೂಚನೆಯಂತೆಯೇ, ಕೊಠಡಿಯ ಸೋಫಾದ ದಿಕ್ಕನ್ನು ಬದಲಿಸಿದ್ದಾರೆ. ಅಷ್ಟೇ ಅಲ್ಲಾ ವಾಲ್ ಪ್ಲೇಟ್ ಗಳ ಜಾಗವನ್ನೂ ಬದಲಿಸಿದ್ದಾರೆ.