ಈ ಅವಧಿಯಲ್ಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗೋದು ಶತಸಿದ್ಧ. ಗುರು ಪೂರ್ಣಿಮೆಯ ಪವಿತ್ರ ದಿನದಂದು ಆಶೀರ್ವದಿಸುತ್ತಿದ್ದೇವೆ ಇದನ್ನ ಯಾರಿಂದಲೂ ತಪ್ಪಿಸೋದಕ್ಕೆ ಆಗೋದಿಲ್ಲ. ಡಿಕೆ ಶಿವಕುಮಾರ್ ಸಂಕಲ್ಪ ಈಡೇರಲಿದೆ ಅಂತಾ ದಾವಣಗೆರೆಯಲ್ಲಿ ನೊಣವಿನಕೆರೆ ಶಿವಯೋಗ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಡಿಕೆಶಿ ಅಧಿಕಾರ ಸ್ವೀಕರಿಸಿಯೇ ಸ್ವೀಕರಿಸ್ತಾರೆ ಅಂತಾ ಅವರು ವಿಶ್ವಾಸ ವ್ಯಕ್ತಪಡಿಸಿದಿದಾರೆ. ಈ ನಾಡಿನ ರೈತರ, ಉದ್ಯಮಿಗಳ, ವ್ಯಾಪಾರಿಗಳ ಕನಸವನ್ನು ಡಿಕೆಶಿ ಈಡೇರಿಸಲಿದ್ದಾರೆ. ಅವರಿಗೆ ಹಿಂದೆ ಗುರುವಿದ್ದಾನೆ ಮುಂದೆ ಗುರಿ ಇದೆ ಅಂತಾ ಶಿವಯೋಗ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.