ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಟೆನಿಸ್ ಲೆಜೆಂಡ್ ನೊವಾಕ್ ಜೊಕೊವಿಚ್ ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡ್ಡಿ ಸಂಭ್ರಮಿಸಿದ್ದಾರೆ.
ಪುರುಷರ ಟೆನಿಸ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೆರ್ಬಿಯಾದ ಟೆನಿಸ್ ಲೆಜೆಂಡ್ ನೊವಾಕ್ ಜೊಕೊವಿಚ್, ಸ್ಪೇನ್ ನ ಕಾರ್ಲೋಸ್ ಅಲ್ಕರಾಝ್ ರನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದೇ ಕಾರ್ಲೋಸ್ ಅಲ್ಕರಾಝ್ ವಿರುದ್ಧ ಈ ಹಿಂದೆ ನಡೆದ ವಿಂಬಲ್ಡನ್ ಫೈನಲ್ ನಲ್ಲಿ ಜೊಕೊವಿಚ್ ಸೋತಿದ್ದರು. ಸದ್ಯ ಒಲಿಂಪಿಕ್ಸ್ ನಲ್ಲಿ ಅಲ್ಕರಾಝ್ ರನ್ನು ಮಣಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಅಲ್ಲದೇ, ಒಲಿಂಪಿಕ್ಸ್ ಚಿನ್ನಕ್ಕೂ ಕೊರಳೊಡ್ಡಿದ್ದಾರೆ.
ಫೈನಲ್ ನ ರೋಚಕ ಪಂದ್ಯದಲ್ಲಿ ಜೊಕೊವಿಚ್ 7-6(3), 7-6(2) ಸೆಟ್ ಗಳಿಂದ ಅಲ್ಕರಾಝ್ ರನ್ನು ಸೋಲಿಸಿದರು. ಈ ಮೂಲಕ ಜೊಕೊವಿಕ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಅಲ್ಕರಾಝ್ ತಮ್ಮ ಮೊದಲ ಒಲಿಂಪಿಕ್ ಚಿನ್ನದ ಪದಕದಿಂದ ವಂಚಿತರಾಗಿ, ಸೋಲಿನ ಕಹಿ ಉಂಡರು.