ಕೋಲಾರ ಜಿಲ್ಲೆಯ ಗಡಿಗ್ರಾಮ ಕದರಿನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭೇಟಿ ನೀಡಿ ಗಡಿಭಾಗದಲ್ಲಿ ರಸ್ತೆ, ನೀರು, ಬೀದಿ ದೀಪ, ಶಾಲಾ ಕಟ್ಟಡ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು. ಅಭಿವೃದ್ದಿ ಕಾಣದೆ ಹಿಂದುಳಿದಿರುವ ಬಂಗಾರಪೇಟೆ ತಾಲೂಕಿನ ದೋಣಿಮಡುಗು ಮತ್ತು ತೊಪ್ಪನಹಳ್ಳಿ ಗ್ರಾಮ ಪಂಚಾಯ್ತಿಗಳ ಗಡಿ ಗ್ರಾಮಗಳಲ್ಲಿ ರಸ್ತೆ, ನೀರು, ಶಾಲಾ ಕಟ್ಟಡ, ಬೀದಿ ದೀಪ ಸಮಸ್ಯೆ ಅತಿಶೀಘ್ರದಲ್ಲಿ ಬಗೆಹರಿಸುವ ಭರವಸೆ ನೀಡಿದರು.