ಕೊಪ್ಪಳ : ಕೊಪ್ಪಳದಲ್ಲಿ ಕಾರ್ಖಾನೆಗಳಿಂದ ಹೊರಸೂಸುವ ವಿಷಕಾರಿ ಹೊಗೆ ಜನರ ಉಸಿರಾಟಕ್ಕೂ, ಆರೋಗ್ಯಕ್ಕೂ ಗಂಭೀರ ಅಪಾಯ ಉಂಟುಮಾಡಿದ್ದು, ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗಲು ಹೊತ್ತಿನಲ್ಲಿ ಆಕಾಶ ಕಪ್ಪಾಗಿ ಕಾಣುವ ಪರಿಸ್ಥಿತಿಯು, ಗಾಳಿಯಲ್ಲಿ ವಿಷಕಾರಿ ಕೆಮಿಕಲ್ ಮಿಶ್ರಿತ ಧೂಳು, ಮನೆಯ ಅಂಗಳ, ಕುಡಿಯುವ ನೀರು ಮತ್ತು ರೈತರು ಬೆಳೆದ ಬೆಳೆಗಳ ಮೇಲೂ ಬೂದಿ ಕುಳಿತುಕೊಳ್ಳುತ್ತಿರುವುದು ಸ್ಥಳೀಯರನ್ನು ಕಾಡುತ್ತಿದೆ. ಇದರಿಂದ ಅಸ್ತಮಾ, ಚರ್ಮ ವ್ಯಾಧಿ ಮತ್ತು ಉಸಿರಾಟದ ತೊಂದರೆಗಳು ಹೆಚ್ಚುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜನರ ಹೋರಾಟ ಮತ್ತು ದೂರವಾಣಿ ದೂರುಗಳಿಗೆ ಮಣಿಸಿದ ಜಿಲ್ಲಾಡಳಿತ, ಕೊಪ್ಪಳ ತಾಲೂಕು ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಸಕರು ಮತ್ತು ಡಿಸಿ ಸಭೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ 5 ಪ್ರಮುಖ ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 3 ಫ್ಯಾಕ್ಟರಿಗಳನ್ನು ತಕ್ಷಣವೇ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.
ಕೊಪ್ಪಳದಲ್ಲಿನ ಪಿಬಿಕೆಎಸ್, ಇಸ್ಪಾತ್, ವನ್ಯ ಸ್ಟೀಲ್ ಸೇರಿದಂತೆ ಕೆಲ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಇವುಗಳಲ್ಲಿ ಈಗಾಗಲೇ 3 ಕಾರ್ಖಾನೆಗಳ ತಪಾಸಣೆ ಮುಗಿಯಿದ್ದು, 2ಕ್ಕೆ ಕ್ಲೋಸರ್ ಆದೇಶ ಜಾರಿ, ಮತ್ತೊಂದೂ ಬೇಗ ಬಂದ್ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್, ಮಕ್ಕಳ ಬಿಸಿಯೂಟಕ್ಕೂ ತಟ್ಟಿತು ಯುದ್ಧದ ಬಿಸಿ



















