ಕಲಬುರಗಿ: ಕಲಬುರಗಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕೋಗನೂರ್ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ತೀರಂಗಾಕ್ಕೆ ಅಪಮಾನ ಮಾಡಲಾಗಿದೆ. ಸೂರ್ಯೋದಯ ವೇಳೆ ಧ್ವಜ ಹಾರಿಸಿ ಸೂರ್ಯಾಸ್ತ ಸಂದರ್ಭ ರಾಷ್ಟ್ರಧ್ವಜ ಇಳಿಸಬೇಕು. ಆದರೆ ಕೋಗನೂರ್ ಗ್ರಾಮ ಪಂಚಾಯತಿಯಲ್ಲಿ ಜನವರಿ 26 ರಂದು ಹಾರಿಸಿದ ಧ್ವಜವನ್ನು ಬಳಿಕ ಇಳಿಸದೆ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದಾರೆ.
ಗ್ರಾಮ ಪಂಚಾಯತಿ ಸಿಬ್ಬಂದಿಗಳ ಬೇಜವಾಬ್ದಾರಿ ನಡೆಗೆ ಗ್ರಾಮಸ್ಥರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.