ಬೆಂಗಳೂರು : ಕೆಂಗೆರಿ ಹೋಬಳಿ ಸರ್ವೆ 26 ರಲ್ಲಿ ತುರಳ್ಳಿಯಲ್ಲಿ 20 ಎಕರೆ ಜಮೀನು 1960ರಲ್ಲಿ ಮಾರಾಟ ಮಾಡಲಾಗಿದ್ದು, ಎಕರೆಗೆ 300 ರಂತೆ ಆರು ಸಾವಿರಕ್ಕೆ 20 ಎಕರೆ ಜಮೀನು ಕೆಲವು ಷರತ್ತುಗಳನ್ನು ಹಾಕಿ ಮಾರಟ ಮಾಡಲಾಗಿತ್ತು ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ, ಈ ಜಾಗವನ್ನು ಅಭಿಮಾನ್ ಸ್ಟುಡಿಯೋ ಕೆಲಸಕ್ಕಾಗಿ ಮಾತ್ರ ಬಳಕೆ ಮಾಡಬೇಕು ಎಂದು ಷರತ್ತು ಹಾಕಿದೆ ಮಾರಟ ಮಾಡಲಾಗಿತ್ತು. ಆದರೆ ಆರ್ಥಿಕ ಸಮಸ್ಯೆ ಕಾರಣ ನೀಡಿ, ಹತ್ತು ಎಕರೆ ಜಮೀನು ಮಾರಾಟಕ್ಕೆ ಅವಕಾಶ ಕೇಳಿದ್ದರು. ಅದಾಗ್ಯೂ, ಸ್ಟುಡಿಯೋ ಕಾರ್ಯಕ್ಕೆ ಮಾತ್ರ ಬಳಕೆ ಮಾಡಬೇಕು ಎನ್ನುವ ಷರತ್ತು ಹಾಕಲಾಗಿತ್ತು. ಆದರೆ ಎಲ್ಲ ಷರತ್ತುಗಳನ್ನು ಉಲ್ಲಂಘನೆ ಮಾಡಿದಲ್ಲದೆ 14ಲಕ್ಷಕ್ಕೆ ಒಂದು ಎಕರೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗಾಗಿ ಎಲ್ಲ ಷರತ್ತು ಉಲ್ಲಂಘನೆ ಆಗಿರುವುದರಿಂದ ಸರ್ಕಾರ ಭೂಮಿಯನ್ನು ಮರು ವಶಕ್ಕೆ ಪಡೆದುಕೊಳ್ಳಲು ಸೂಚನೆ ನೀಡಲಾಗಿದ್ದು, ಅಲ್ಲಿ ಒಂದು ಟೀ ಪಾರ್ಕ್, ಲಂಗ್ ಸ್ಪೇಸ್ ಹಾಸ್ಪಿಟಲ್ ಗೆ ಜಮೀನು ಕೇಳಿದ್ದಾರೆ ಅದಕ್ಕಾಗಿ ಎಲ್ಲ ಯೋಜನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕೋರ್ಟ್ ನಲ್ಲಿಯೂ ಕೂಡ ಈ ವಿಚಾರ ಇದೆ. ವಿಷ್ಣು ಸೇನಾ ಸಮಿತಿ ಅಧ್ಯಕ್ಷರು ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ನಮಗೆ ಅಭಿಮಾನವಿದೆ. ಈ ವಿಚಾರವನ್ನು ಸಿಎಂ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


















