ಮೈಸೂರು: ಸರ್ಕಾರ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಸಾಕಷ್ಟು ಅನುದಾನವನ್ನು ಮೀಸಲಿಡುತ್ತಿದೆ. ಆದರೆ, ಜನಕ್ಕೆ ಅವುಗಳು ತಲುತ್ತಿವೆಯಾ? ಎಂಬುವುದು ಮಾತ್ರ ಯಕ್ಷ ಪ್ರಶ್ನೆಯಾಗುತ್ತಿದೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಗೋಳೂರು ಹಾಡಿಯ ಜನರಿಗೆ ಕುಡಿಯಲು ಕೂಡ ನೀರಿಲ್ಲದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗುತ್ತಿದೆ.
ಕುಡಿಯಲು ಸಮರ್ಪಕ ಹಾಗೂ ಶುದ್ಧ ನೀರು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಹಾಡಿಯಲ್ಲಿನ ನೂರಾರು ಕುಟುಂಬಗಳು ಗುಂಡಿಯಲ್ಲಿ ಸಂಗ್ರಹವಾದ ಕೊಳಚೆ ನೀರನ್ನೇ ಬಳಕೆ ಮಾಡುತ್ತಿವೆ. ದನ-ಕರುಗಳು, ಕಾಡು ಪ್ರಾಣಿಗಳು ಕುಡಿಯುವ ನೀರನ್ನೇ ಇಲ್ಲಿ ಮನುಷ್ಯರು ಕುಡಿಯುತ್ತಿದ್ದಾರೆ. ದನ ಕರುಗಳು ಮಿಂದೆದ್ದ ನೀರಲ್ಲೇ ಇವರು ಮಿಂದೇಳಬೇಕಾಗಿದೆ. ಕಾಡು ಪ್ರಾಣಿಗಳ ಶೌಚ ನೀರು ಇವರಿಗೆ ಅಮೃತವಾದಂತಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.