ಹೈದರಾಬಾದ್: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಬಂಧನ ಭೀತಿ ಎದುರಾಗಿದ್ದು, ತಲೆ ಮರೆಸಿಕೊಂಡಿದ್ದಾರೆ.
ಸೋಮವಾರ ನಿರ್ದೇಶಕನನ್ನು ಬಂಧಿಸಲು ಹೋಗಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ. ನಾಯ್ಡು ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕಾಗಿ ಹೈದರಾಬಾದ್ ನ ಮುದ್ದಿಪಡು ಪೊಲೀಸ್ ಠಾಣೆಯಲ್ಲಿ ವರ್ಮಾ ವಿರುದ್ಧ ನ. 11ರಂದು ಕೇಸ್ ದಾಖಲಾಗಿತ್ತು. ನಾಯ್ಡು ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಅವರ ಕುಟುಂಬ ಸದಸ್ಯರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಕ್ಕಾಗಿ ದೂರು ದಾಖಲಾಗಿದೆ.
ನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಆದರೆ, ಆ ಸಮನ್ಸ್ ಗೆ ರಾಮ್ ಗೋಪಾಲ್ ವರ್ಮಾ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರು ವರ್ಮಾ ಅವರನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ವರ್ಮಾ ತಲೆ ಮರೆಸಿಕೊಂಡಿದ್ದಾರೆ.
ಇವುಗಳ ಮಧ್ಯೆ ವರ್ಮಾ ಪರ ವಕೀಲರು ನ. 25ರಂದು ಸಂಜೆ ನ್ಯಾಯಾಲಯದ ಮೊರೆ ಹೋಗಿ, ಅರ್ಜಿ ಸಲ್ಲಿಸಿದ್ದಾರೆ. ಅವರು, ಠಾಣೆಗೆ ಭೌತಿಕವಾಗಿ ಹಾಜರಾಗುವ ಅವಶ್ಯಕತೆಯೇನಿಲ್ಲ. ಅದರ ಬದಲು ಡಿಜಿಟಲ್ ಮೂಲಕ ಅವರು ಹಾಜರಾಗುತ್ತಾರೆ. ಈ ಕೇಸ್ ನಲ್ಲಿ ಡಿಜಿಟಲ್ ಮಾದರಿಯಲ್ಲಿ ಹಾಜರಾಗಲು ಹೊಸದಾಗಿ ಜಾರಿಯಾಗಿರುವ ಭಾರತ್ ನಾಗರಿಕ್ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್)ದಲ್ಲಿ ಅವಕಾಶವಿದೆ ಎಂದು ಮನವಿ ಮಾಡಿದ್ದಾರೆ.