ಈತನನ್ನು ಬಾಲಿವುಡ್ ಮಂದಿ ಕ್ಯಾಕರಿಸಿ ಮಕಕ್ಕೆ ಉಗಿದು ಒದ್ದು ಓಡಿಸಿದ್ದಾಗಿದೆ. ಟಾಲಿವುಡ್ ನಲ್ಲಂತೂ ಈವಯನ್ನಿಗೆ ಬೀದಿ ನಾಯಿಗಿರೋ ಮರ್ಯಾದೆನೂ ಇಲ್ಲ. ಮಾಡಿರೋ ಮೂರು ಮತ್ತೊಂದು ಸಿನಿಮಾದಲ್ಲಿ ಗುಂಪಲ್ಲಿ ಗೋವಿಂದ ಆಗಿರೋ ಫಿಲ್ಮ್ ಗಳೇ ಹೆಚ್ಚು.
ತನ್ನನ್ನ ತಾನು ದೊಡ್ಡ ಪುಡಿಂಗ್ ಅಂದುಕೊಂಡಿರೋ ಈ ಕಿತ್ತೋದ ನಿರ್ದೇಶಕ..ಇವತ್ತು ಕನ್ನಡಿಗರ ಕೈಯಲ್ಲಿ ಧರ್ಮದೇಟು ತಿನ್ನೋಕೆ ವೇದಿಕೆ ರೂಪಿಸಿಕೊಂಡಿದ್ದಾನೆ. ಯೆಸ್ ನಿರ್ದೇಶಕ ಅನಂತೇನಾದ್ರು ನಾವಿವನನ್ನ ಕರೆದ್ರೆ ನಿಜಕ್ಕೂ ಆ ಪದಕ್ಕಿರೋ ಮರ್ಯಾದೆ ಕಮ್ಮಿ ಆಗುತ್ತೆ. ಹಾಗಾಗಿ ಈ ಕ್ಯಾತೆ ಕುಮಾರನನ್ನ ನಾವು ಬಿಲ್ಡಪ್ ಗೋಪಾಲ ಅಂತನೇ ಕರೆಯೋಣ. ಹೌದು ನಾವಿವತ್ತು ಹೇಳ್ತಿರೋದು ರಾಮ್ ಗೋಪಾಲ್ ವರ್ಮಾ ಅನ್ನೋ ಗೊಡ್ಡೆತ್ತಿನ ಕಿರಿಕ್ ಕಹಾನಿಯನ್ನ.
ಕನ್ನಡಗರ ಆರಾಧ್ಯ ದೈವವನ್ನೇ ಅಪಮಾನಿಸಿದ ಬಿಲ್ಡಪ್ ಗೋಪಾಲ
ಮೊನ್ನೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶದಲ್ಲಿ ಈ ಬಿಲ್ಡಪ್ ಗೋಪಾಲ ಆಡಿರೋ ಮಾತುಗಳು ಈಗ ಕನ್ನಡ ಕಲಾಭಿಮಾನಿಗಳನ್ನು ಕೆಂಡವಾಗಿಸಿದೆ. ಮೊದಲೆಲ್ಲ ಇಡೀ ದಕ್ಷಿಣದ ಭಾಷೆಗಳಾದಂತಹ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಅಮಿತಾಬ್ ಬಚ್ಚನ್ ರ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು. 90ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರು ಸಿನಿಮಾಗಳಿಂದ ಐದು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಆಗ ದಕ್ಷಿಣದ ಸಿನಿಮಾ ನಿರ್ದೇಶಕರು ಬಚ್ಚನ್ ಅವರ ಸ್ಟೈಲ್‌ನಲ್ಲಿ ಮಸಾಲಾ ಚಿತ್ರಗಳನ್ನು ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ.
ಇದೇ ರೀತಿ ದಕ್ಷಿಣ ಸಿನಿ ತಾರೆಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು, ಅದು ಇಂದಿಗೂ ಮುಂದುವರೆದಿದೆ ಎಂದು ಆರ್‌ಜಿವಿ ಹೇಳಿಕೊಂಡಿದ್ದಾನೆ. ಕಾಲಿವುಡ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ಎನ್‌ಟಿ ರಾಮರಾಮ್ ಮತ್ತು ಕನ್ನಡದ ರಾಜ್‌ಕುಮಾರ್ ರಂತಹ ನಟರು 70 ಮತ್ತು 80ರ ದಶಕದಲ್ಲಿ ಅಮಿತಾಬ್ ಬಚ್ಚನ್ ರ ಸಿನಿಮಾಗಳನ್ನು ರಿಮೇಕ್ ಮಾಡಿ ಭಾರೀ ಜನಪ್ರಿಯತೆ ಗಳಿಸಿದರು ಎಂದಿದ್ದಾನೆ.
ಮಿಸ್ಟರ್ ಬಿಲ್ಡಪ್ ಗೋಪಾಲ, ಭಾರತೀಯ ಚಿತ್ರರಂಗಕ್ಕೆ ಹೊಸ ಪಥ ತೋರಿಸಿದ್ದು ಕನ್ನಡ ಚಿತ್ರರಂಗ. ಅದ್ರಲ್ಲೂ ಕನ್ನಡಿಗರ ಹೃದಯ ಸಿಂಹಾಸನಾಧೀಶ, ಕನ್ನಡ ಕಂಠೀರವ ಡಾ ರಾಜ್ ಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಬಾಲಿವುಡ್ ಸಿನಿಮಾಗಳನ್ನು ರಿಮೇಕ್ ಮಾಡಿ ಗೆಲ್ಲುವ ದುರ್ಗತಿ ಇರ್ಲಿಲ್ಲ. ಕನ್ನಡ ನೆಲದ, ಕನ್ನಡ ಮಣ್ಣಿನ ಕತೆಗಳು, ಪೌರಾಣಿಕ ಕಥಾ ಹಂದರದ ಸಿನಿಮಾಗಳಿಂದಲೇ ಅಪಾರ ಭಕ್ತಕೋಟಿ ಗಳಿಸಿದ ಕೀರ್ತಿ ಅವರದ್ದು.
ಕೂಲಿ ಸಿನಿಮಾದಲ್ಲಿ ನಟಿಸುವಂತೆ ಬೇಡಿಕೊಂಡಿದ್ದ ಅಮಿತಾಬ್
ಹಾಗೆ ನೋಡಿದರೆ, ಅಮಿತಾಬ್ ಬಚ್ಚನ್ ಗೆ ಅವತ್ತಿಗೆ ದೊಡ್ಡದೊಂಡು ಬ್ರೇಕ್ ಬೇಕಿತ್ತು. ಸಾಲು ಸಾಲು ಸಿನಿಮಾಗಳು ಸೋತು ಮಕಾಡೆ ಮಲಗಿದ್ವು. ಇಂಥಾ ಸಂದರ್ಭದಲ್ಲಿ ಕೂಲಿ ಅನ್ನೋ ಚಿತ್ರ ಆರಂಭವಾಗಿತ್ತು. ಅವತ್ತು ಬೆಂಗಳೂರಿಗೆ ಬಂದಿದ್ದ ಅಮಿತಾಬ್, ನೇರ ಅಣ್ಣಾವ್ರ ಮನೆಗೆ ಹೋಗಿದ್ರು. ಕೂಲಿ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರದಲ್ಲಿ ನಟಿಸಿ ಅಂತಾ ಅಂಗಲಾಚಿದ್ರು. ಆದ್ರೆ, ಅಷ್ಟೇ ವಿನಮ್ರವಾಗಿ, ನಿಮ್ಮ ಭಾಷೆ ಮೇಲೆ ನನಗೆ ಅಭಿಮಾನವಿದೆ, ನಾನು ಕನ್ನಡೇತರ ಸಿನಿಮಾಗಳಲ್ಲಿ ನಟಿಸೋದಿಲ್ಲ ಅಂತಾ ಡಾ ರಾಜ್ ಕುಮಾರ್ ಕಡ್ಡಿ ಮುರಿದ ಹಾಗೆ ಹೇಳಿದರು.
ಮೊನ್ನೆ ಕಮಲ್ ಹಾಸನ್ ಇದೀಗ ರಾಮ್ ಗೋಪಾಲ್
ಈ ಬಿಲ್ಡಪ್ ಗೋಪಾಲನದ್ದು ಸದಾ ಒಂದಿಲ್ಲೊಂದು ಕಿರಿಕ್ ಇದ್ದದ್ದೇ. ಶಿವ ಅನ್ನೋ ಸಿನಿಮಾ ಮೂವಕ ಚಿತ್ರರಂಗಕ್ಕೆ ಬಂದ ಈ ಮಹಾನುಭಾವ, ರಂಗೀಲಾ ಅನ್ನೋ ಬಾಲಿವುಡ್ ಸಿನಿಮಾ ಮೂಲಕ ತನ್ನನ್ನ ತಾನು ದೊಡ್ಡ ಸ್ಟಾರ್ ಅಂತಾ ಭಾವಿಸಿ ಬೋರಲ ಬಿದ್ದವನು. ಅತಿಯಾದ ಕ್ರೌರ್ಯ, ಹೆಣ್ಣಿನ ಶೋಷಣೆ, ಹೀಗೆ ಬರಬರುತ್ತಾ ಈ ಬಿಲ್ಡಪ್ ಗೋಪಾಲನ ತಲೆ ಕಂಪ್ಲೀಟ್ ಖಾಲಿಯಾಗಿ ತೀರಾ ಥರ್ಡ್ ಗ್ರೇಡ್ ಸಿನಿಮಾಗಳನ್ನ ನಿರ್ಮಿಸಿ ಚಿತ್ರರಂಗದಿಂದಲೇ ಒದ್ದು ಹೊರಗೆ ಹಾಕಿಸಿಕೊಂಡವನು. ಡಾ ರಾಜ್ ರ ಕಾಲಿನ ಧೂಳಿಗೆ ಸಮವಲ್ಲದ ಈ ಮರ್ಮವಿಲ್ಲದ ವರ್ಮಾ ವಿರುದ್ಧವೀಗ ಸಮಸ್ತ ಕರುನಾಡು ಸಿಡಿದೆದ್ದಿದೆ. ಮೊನ್ನೆ ಕಮಲ್ ಹಾಸನ್ ಇದೀಗ ಈ ವರ್ಮಾ ಸರದಿ.
ಎನ್ ಟಿಆರ್, ಚಿರಂಜೀವಿ, ರಜಿನಿ ಬಗ್ಗೆಯೂ ಕ್ಯಾತೆ
ಎಲುಬಿಲ್ಲದ ನಾಲಗೆ ಅಂತಾ ಬಾಯಿಗೆ ಬಂದಂತೆ ಮಾತನಾಡೋ ಈ ವರ್ಮಾ, ಕೇವಲ ಡಾ ರಾಜ್ ಕುಮಾರ್ ಅವರಿಗೆ ತನ್ನ ವರಸೆಯನ್ನು ನಿಲ್ಲಿಸಿಲ್ಲ. ತೆಲುಗಿನ ಹಿರಿಯ ತಾರೆ ಎನ್ ಟಿಆರ್, ಚಿರಂಜೀವಿ, ರಜಿನಿಕಾಂತ್ ಕೂಡಾ ಅಮಿತಾಬ್ ಸಿನಿಮಾಗಳನ್ನು ರಿಮೇಕ್ ಮಾಡಿ ಗೆದ್ದದ್ದು ಎಂದಿದ್ದಾನೆ. ಮಿಸ್ಟರ್ ಬ್ರೇನ್ ಲೆಸ್ ವರ್ಮಾ ನೆನಪಿರಲಿ ಇದೇ ಅಮಿತಾಬ್ ಬಚ್ಚನ್ ಅಣ್ಣಾವ್ರು ನಟಿಸಿದ್ದ ಶಂಕರ್ ಗುರು ಸಿನಿಮಾವನ್ನ ಮಹಾನ್ ಅನ್ನೋ ಹೆಸರಲ್ಲಿ ರಿಮೇಕ್ ಮಾಡಿ ಸಕ್ಸಸ್ ಕಂಡವರು. ಇತಿಹಾಸವನ್ನು ಅರಿಯದೆ ಖಾಲಿ ಕೂತಿದ್ದೀನಿ ಅಂತಾ ಬಾಯಿಗೆ ಬಂದಂತೆ ಮಾತನಾಡಿದ್ರೆ ಆಳಿಗೊಂದು ಕಲ್ಲು ಎನ್ನುವಂತೆ ಧರ್ಮದೇಟು ಬೀಳೋದು ನಿಶ್ಚಿತ ನೆನಪಿರಲಿ ಮಿಸ್ಟರ್ ವರ್ಮಾ.



















