ಬೆಂಗಳೂರು: ದಿನೇ ದಿನೇ ಸೈಬರ್ ಖದೀಮರ ಕಾಟ ಹೆಚ್ಚುತ್ತಿರುವ ಬೆನ್ನಲೇ, ಎನ್ಐಎ ಹಾಗೂ ಎಟಿಎಸ್ ಅಧಿಕಾರಿಗಳ ಹೆಸರಲ್ಲಿ ಸುದೀಪ್ ಅಭಿಮಾನಿಯೊಬ್ಬರಿಗೆ ದೆಹಲಿ ಬಾಂಬ್ ಬ್ಲಾಸ್ಟ್ನಲ್ಲಿ ನಿಮ್ಮ ಕೈವಾಡವಿದೆ ಎಂದು ಡಿಜಿಟಲ್ ಅರೆಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಕೂಡ ಬಳಕೆಯಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಈ ಆರೋಪದಿಂದ ನಿಮಗೆ ಮುಕ್ತಿ ಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ನಾವು ಹೇಳಿದಂತೆ ಕೇಳಿದರೆ ಮಾತ್ರ ನಿಮಗೆ ‘ಸರ್ಟಿಫಿಕೇಟ್ ಆಫ್ ಇನ್ವಸೇನಟ್’ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಬೆದರಿಕೆಗೆ ಭಯಗೊಂಡ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಣ ಕಳೆದುಕೊಂಡಿದ್ದಾರೆ.

ಈ ವಂಚನೆ ಬಗ್ಗೆ ವಿಸ್ತಾರವಾಗಿ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಂಚಿಕೊಂಡಿದ್ದಾರೆ. “ನನಗೆ ಒಬ್ಬ ವ್ಯಕ್ತಿ ಕಾಲ್ ಮಾಡಿ, ನಾವು ಎಟಿಎಸ್ ನಿಂದ ಕರೆ ಮಾಡುತ್ತಿದ್ದೇವೆ. ದೆಹಲಿ ರೆಡ್ ಫೋರ್ಟ್ ಬ್ಲಾಸ್ಟ್ ನಲ್ಲಿ ನಿಮ್ಮ ಕೈವಾಡವಿದೆ ಎಂದು ಹೇಳಿದ್ರು, ನನಗೂ ಸ್ವಲ್ಪ ಹೆದರಿಕೆ ಆಯಿತು. ಇಲ್ಲ ಸರ್ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದೆ. ಆದರೆ ಅವರು ನಿಮ್ಮ ಕೈವಾಡ ಇದೆ ಎಂಬ ಸಾಕ್ಷಿ ಸಿಕ್ಕಿದೆ. ನಮ್ಮ ಎನ್ ಐ ಎ ಟೀಂ ಸದ್ಯದಲ್ಲೆ ಕಾಲ್ ಮಾಡುತ್ತದೆ ಎಂದು +91 9620122894, +91 6262656645 ನಿಂದ ವೀಡಿಯೋ ಕರೆ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ, ನಾನು ಗೌರವ್ ಎನ್ಐಎ ಆಫೀಸರ್, ನಿಮ್ಮ ವಿಡಿಯೋ ಹೇಳಿಕೆಬೇಕು ಎಂದು ನನ್ನ ವೈಯಕ್ತಿಕ ದಾಖಲೆಗಳನ್ನು ಕೇಳಿದ್ದಾರೆ. ಜತೆಗೆ ನನ್ನ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೂಡ ಕೇಳಿದ್ದರೆ, ನಾವು ಹೇಳುವರೆಗೆ ಕಾಲ್ ಕಟ್ ಮಾಡಬೇಡಿ ಎಂದು ಹೇಳಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ತುಂಬಾ ಮೃದುವಾಗಿ ಮಾತನಾಡಲು ಶುರು ಮಾಡಿದ್ದಾರೆ, ನಿಮ್ಮ ಮೇಲಿನ ಆರೋಪ ಹೋಗಬೇಕೆಂದರೆ, ನಿಮಗೆ ಸರ್ಟಿಫಿಕೇಟ್ ಆಫ್ ಇನ್ವಸೇನಟ್ ಬೇಕೆಂದರೆ ಸ್ವಲ್ಪ ಹಣ ಪೇ ಮಾಡಬೇಕು. ಅದು ಗವರ್ನಮೆಂಟ್ ಫೀಸ್ ಎಂದು ಹೇಳಿದ್ದಾರೆ. ಈ ತನಿಖೆ ಮುಗಿದ ನಂತರ ವಾಪಾಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಶರಣ್ ಆರ್ ಮುಕುಂದ್ ಅವರು ವಂಚಕರಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹೀಗೆ ಒಟ್ಟು 5.53 ಲಕ್ಷ ರೂ.ವರೆಗೆ ಹಣವನ್ನು ವಂಚಕರಿಗೆ ಕಳುಹಿಸಿದ್ದಾರೆ. ಕೊನೆಗೆ ಶರಣ್ ಆರ್ ಮುಕುಂದ್ ಅವರಿಗೆ ಈ ಬಗ್ಗೆ ಅನುಮಾನ ಬಂದು 1930ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌತ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮತ್ತೆ ದೆಹಲಿ ಪ್ರವಾಸಕ್ಕೆ ಸಜ್ಜಾದ ಡಿಕೆ | ನಾಳೆ ರಾಹುಲ್ ಗಾಂಧಿ ಜೊತೆ ಕುರ್ಚಿ ಚರ್ಚೆ?



















