ಚಿಕ್ಕೋಡಿ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ ಆದ್ರೆ ಇಲ್ಲೊಬ್ಬ ಶಿಕ್ಷಕ ಅಂತಹ ಸರ್ಕಾರಿ ಕೆಲಸವನ್ನೇ ದುರುಪಯೋಗ ಮಾಡಿಕೊಂಡಿದ್ದಾನೆ. ಇದೀಗ 10ನೇ ತರಗತಿ ಪರೀಕ್ಷ ಮುಗಿದಿದ್ದು, ಶಿಕ್ಷಕರಿಗೆ ಪೇಪರ್ ವ್ಯಾಲಿವೇಷನ್ ಡ್ಯೂಟಿ ಮಾಡ್ತಾ ಇದ್ದಾರೆ. ಆದ್ರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ತೋರಣಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಎಸ್.ಬಿ. ಸಂಕಪಾಳ ಡ್ಯೂಟಿಗೆ ಹಾಜರಾಗದೇ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡು ಹೇಳಲು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇತ್ತ ಸರ್ಕಾರಿ ಸಂಬಳವೂ ಪಡೆದು ಅತ್ತ ಕಾರ್ಯಕ್ರಮದ ಸಂಬಳವೂ ಪಡೆದು ಹಣ ಮಾಡ್ತಾ ಇದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೋಷಕರು ಹಾಗೂ ಸಾರ್ವಜನಿಕರು ಹೇಳುವಂತೆ, ತರಗತಿಯ ವೇಳೆಯಲ್ಲೂ ಹಾಜರಾಗುತ್ತಿರುವುದು ಗಮನಿಸಿದ್ದೇವೆ ಎಂದು ಹೇಳಿದ್ದಾರೆ.
ಪೋಷಕರು ಮತ್ತು ಶಾಲಾ ಸಮಿತಿ ಈ ಪ್ರಕರಣದ ಬಗ್ಗೆ ಶಿಕ್ಷಣ ಇಲಾಖೆಯಿಂದ ತುರ್ತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣವು ಶಾಲೆಯ ನಿಯಮ ಪಾಲನೆ ಮತ್ತು ಮಕ್ಕಳ ಉತ್ತಮ ಶಿಕ್ಷಣಕ್ಕೆ ಗಂಭೀರ ಪ್ರಶ್ನೆ ಎತ್ತುವಂತಿದೆ.
ಇದನ್ನೂ ಓದಿ : ತಂದೆ ಸಮಾಧಿಗೆ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಉಮೇಶ್ ಮೇಟಿ



















