ಬೆಂಗಳೂರು : ತನ್ನ ತಾಯಿಯ ಚಿನ್ನವನ್ನು ಕದ್ದಿದ್ದೀಯಾ ಎಂದು ಆರೋಪಿಸಿದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೋಣನಕುಂಟೆಯ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದೆ. ರಾಹುಲ್ ಮೃತ ದುರ್ದೈವಿ, ಪ್ರೀತಂ ಹತ್ಯೆಗೈದ ಆರೋಪಿ.
ರಾಹುಲ್ ಹಾಗೂ ಪ್ರೀತಂ ಇಬ್ಬರು ಆಪ್ತ ಸ್ನೇಹಿತರಾಗಿದ್ದರು. ಕಳೆದ ಹತ್ತು ದಿನದ ಹಿಂದೆ ಪ್ರೀತಂ ತಾಯಿಯ ಮೂರು ಗ್ರಾಂ ಚಿನ್ನ ಕಳ್ಳತನವಾಗಿತ್ತು. ಆ ಚಿನ್ನ ಕದ್ದಿದ್ದು ಯಾರು ಎನ್ನುವ ಗೊಂದಲ ಸೃಷ್ಠಿಯಾಗಿತ್ತು.
ಈ ಸಮಯದಲ್ಲಿ ರಾಹುಲ್ ಕದ್ದಿದ್ದಾನೆಂದು ಪ್ರೀತಂ ಮತ್ತು ಪ್ರೀತಂ ಕದ್ದಿದ್ದಾನೆಂದು ರಾಹುಲ್ ಒಬ್ಬರಿಗೊಬ್ಬರು ಆರೋಪಿಸಿಕೊಳ್ಳುತ್ತಿದ್ದರು. ಕಳೆದ ಶನಿವಾರ ಪ್ರೀತಂ ಬ್ಯಾಗ್ ನಲ್ಲಿಯೇ ಚಿನ್ನ ನೋಡಿದ್ದೆ, ನಿನ್ನ ಮಗನೇ ಚಿನ್ನ ಕದ್ದಿದ್ದು ಎಂದು ಪ್ರೀತಂ ತಾಯಿಗೆ ರಾಹುಲ್ ಹೇಳಿದ್ದಾನೆ. ಇದರಿಂದ ಕೋಪಗೊಂಡು ಚಾಕುವಿನಿಂದ ಇರಿದು ಪ್ರೀತಂ, ರಾಹುಲ್‌ನನ್ನು ಕೊಲೆ ಮಾಡಿದ್ದಾನೆ.
ಈ ಪ್ರಕರಣ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಪ್ರೀತಂನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ವದಂತಿಗಳಿಗೆ ತೆರೆ | ರಾಕಿಂಗ್ ಸ್ಟಾರ್ ಯಶ್ ನಟನೆಯ “ಟಾಕ್ಸಿಕ್” ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್



















