ಏರ್ ಇಂಡಿಯಾ ವಿಮಾನ ಪತನವಾಗುವುದಕ್ಕೂ ಮುನ್ನ ಲಂಡನ್ ಗೆ ತೆರಳುವ ಮುನ್ನ ದೆಹಲಿಯಿಂದ ಬಂದಿತ್ತು. ಹೀಗಾಗಿ ದೆಹಲಿಯಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಕರಾಳ ಅನುಭವವಾಗಿದೆ.
ಈ ವೇಳೆ ವಿಮಾನದಲ್ಲಿದ್ದವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ವಿಮಾನದಲ್ಲಿದ್ದ ಎಸಿ ಕೆಲಸ ಮಾಡುತ್ತಿರಲಿಲ್ಲ. ಮನೋರಂಜನಾ ಸಿಸ್ಟಂ ಇರಲಿಲ್ಲ. ಅಲ್ಲಿನ ಅವ್ಯವಸ್ಥೆಯನ್ನು ಪ್ರಯಾಣಿಕ ಆಕಾಶ್ ವತ್ಸ ಬಯಲು ಮಾಡಿದ್ದರು. ದೆಹಲಿಯಿಂದ ಅಹಮದಾಬಾದ್ ಗೆ ಆಕಾಶ್ ಪ್ರಯಾಣಿಸಿದ್ದರು. ಎಐ-171 ವಿಮಾನದಲ್ಲಿ ಸಾಲು ಸಾಲು ಅವ್ಯವಸ್ಥೆ ಪ್ರಯಾಣಿಕರಿಗೆ ಎದುರಾಗಿದ್ದವು. ಈ ಬಗ್ಗೆ ಏರ್ ಇಂಡಿಯಾಗಿ ಆಕಾಶ್ ವತ್ಸ ದೂರು ನೀಡಿದ್ದರು. ಆಕಾಶ್ ವತ್ಸ್ ಏರ್ ಇಂಡಿಯಾಗ ದೂರು ನೀಡಿದ ಎರಡು ಗಂಟೆಯ ಬಳಿಕ ಈ ದುರ್ಘಟನೆ ಸಂಭವಿಸಿದೆ.
ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಂಬನಿ ಮಿಡಿದಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ. ಇದರಿಂದ ಅತೀವ ನೋವು ಉಂಟಾಗಿದೆ. ದುರಂತದಲ್ಲಿ ಸಿಲುಕಿರುವವರಿಗೆ ನೆರವು ನೀಡುವ ವಿಚಾರವಾಗಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಕೂಡ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಈ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದ್ದು, ಗುಜರಾತ್ ನ ಮಾಜಿ ಸಿಎಂ ದುರ್ಮರಣರಾಗಿದ್ದಾರೆ. ಅಲ್ಲದೇ, ವಿಮಾನದಲ್ಲಿದ್ದ ಎಲ್ಲ 242 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ವಿಮಾನದಲ್ಲಿದ್ದ ಇಬ್ಬರು ಪೈಲೆಟ್, 10 ಜನ ಸಿಬ್ಬಂದಿ ವಿಧಿವಶರಾಗಿದ್ದಾರೆ. ದುರಂತದಲ್ಲಿ ಮೇಘಾಲಯ ಮೂಲದ ಗಗನಸಖಿ ನಗಂತೋಯಿ ಶರ್ಮಾ ಸಾವನ್ನಪ್ಪಿದ್ದಾರೆ. ಈಗ ಮಗಳ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ಗೋಳಾಡುತ್ತಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳ ಸಾವಿನ ಸುದ್ದಿ ಕೇಳಿ, ತಾಯಿ ಫೋಟೋ ಹಿಡಿದು ಕಣ್ಣೀರು ಸುರಿಸುತ್ತಿದ್ದಾರೆ.
ಅಪಘಾತಕ್ಕೀಡಾದ ವಿಮಾನ ಕರಾಳ ಇತಿಹಾಸ ಹೊಂದಿದೆ. ಈ ವಿಮಾನದಲ್ಲಿ ಕಳೆದ 6 ತಿಂಗಳ ಹಿಂದೆಯಷ್ಟೇ ತಾಂತ್ರಿಕ ದೋಷ ಕಂಡು ಬಂದಿತ್ತು. ಡಿಸೆಂಬರ್ 2024ರಲ್ಲಿ ವಿಮಾನದಲ್ಲಿ ಲೋಪ ಪತ್ತೆಯಾಗಿದೆ. ಆಗಸಕ್ಕೆ ಹಾರಿದ್ದ ವಿಮಾನವಂದು ತುರ್ತು ಭೂಸ್ಪರ್ಷವಾಗಿತ್ತು. ಆ ವೇಳೆ ಈ ವಿಮಾನವು 300 ಜನರನ್ನು ಹೊತ್ತು ಸಾಗಿತ್ತು. 6 ತಿಂಗಳ ಹಿಂದಿನಿಂದಲೇ ಈ ವಿಮಾನದಲ್ಲಿ ದೋಷ ಕಂಡು ಬರುತ್ತಿತ್ತು. ಆದರೆ, ಏರ್ ಇಂಡಿಯಾ ವಿಮಾನದಲ್ಲಿನ ದೋಷ ಸರಿಪಡಿಸಲಾಗಿದೆ ಎಂದಿತ್ತು. ಎಐ-171 ಐದು ತಿಂಗಳ ಹಿಂದಷ್ಟೇ ಸೇವೆಗೆ ವಾಪಸ್ ಆಗಿತ್ತು. ಅಂದು ತಪ್ಪಿದ ದುರಂತ ಇಂದು ಘಟಿಸಿದೆ.
ಈ ದುರಂತದಲ್ಲಿ ಈಗ ಮಾಜಿ ಸಿಎಂ ವಿಜಯ್ ರುಪಾನಿ ಈ ದುರಂತದಲ್ಲಿ ವಿಧಿವಶರಾಗಿದ್ದಾರೆ. ರುಪಾಣಿ ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ 1.39ಕ್ಕೆ ವಿಮಾನ ಟೇಕ್ ಆಫ್ ಆಗಬೇಕಿತ್ತು. ಟೇಕಾಫ್ ಆಗಿ ಐದು ನಿಮಿಷಕ್ಕೆ ಈ ದುರ್ಘಟನೆ ನಡೆದಿದೆ. ಆಗುವ 5 ನಿಮಿಷಕ್ಕೆ ಮೊದಲು ಈ ದುರ್ಘಟನೆ ನಡೆದಿದೆ. ಈ ಪೈಕಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ವಿಮಾನ ಪತನ ದುರಂತ ಭವಿಷ್ಯದ ವೈದ್ಯರನ್ನೇ ಆಹುತಿ ಪಡೆದಿದೆ. ಬಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ವಿಮಾನ ಅಪ್ಪಳಿಸಿದೆ. ಹಾಸ್ಟೆಲ್ ನ ಮೇಲ್ಛಾವಣಿಯಲ್ಲಿದ್ದ ಮೆಸ್ ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಮಧ್ಯಾಹ್ನದ ಊಟಕ್ಕೆ ತೆರಳಿದ್ದ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು ದುರ್ಮರಣ ಹೊಂದಿದ್ದಾರೆ. ಈ ವಿಮಾನ ಅಹಮದಾಬಾದ್ ನ ಬಿಜೆ ಹಾಸ್ಟೆಲ್ ಗೆ ಅಪ್ಪಳಿಸಿದೆ. ವಿಮಾನ ಬಿಜೆ ಆಸ್ಪತ್ರೆ ಹಾಸ್ಟೆಲ್ ನ ಮೆಸ್ ಗೆ ಅಪ್ಪಳಿಸಿಸುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪರಿಣಾಮ ಹಾಸ್ಟೇಲ್ ನಲ್ಲಿದ್ದ 20ಕ್ಕೂ ಅಧಿಕ ವಿದ್ಯಾರ್ಥಿಗಳು ದುರ್ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಮಾನದಲ್ಲಿ ಇಬ್ಬರು ಪೈಲೆಟ್, 10 ಸಿಬ್ಬಂದಿ ಸೇರಿದಂತೆ 242 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಮಾನಕ್ಕೆ ಸುಮಿತ್ ಸಬರ್ವಾಲ್ ಪೈಲೆಟ್ ಆಗಿದ್ದರು. ಈ ವಿಮಾನ ನಿಲ್ದಾಣದ ಆವರಣದಿಂದ ದಟ್ಟ ಹೊಗೆ ಹೊರಬರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ವಿಮಾನದಲ್ಲಿ 242 ಮಂದಿ ಇದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ. ವಿಮಾನ ಪತನವಾಗುತ್ತಿದ್ದಂತೆ ವಿಮಾನ ಹೊತ್ತಿ ಉರಿದಿದೆ. ಹೀಗಾಗಿ 242 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ವಿಮಾನದ ಇಂಜಿನ್ ದೋಷವೇ ದುರಂತಕ್ಕೆ ಕಾರಣವಾ ಎಂಬ ಶಂಕೆ ವ್ಯಕ್ತವಾಗಿದೆ. ದುರಂತಕ್ಕೂ 20 ನಿಮಿಷ ಮುಂಚೆ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ್ದರು. ಅಹಮದಾಬಾದ್ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ 20 ನಿಮಿಷಗಳಲ್ಲೇ ಈ ದುರಂತ ಸಂಭವಿಸಿದೆ. ವಿಮಾನ ಪತವಾಗಿರುವುದನ್ನು ಏರ್ ಇಂಡಿಯಾ ಆಡಳಿತ ಮಂಡಳಿ ದೃಢಪಡಿಸಿದೆ. ವಿಮಾನ ದುರಂತ ನಿಜಕ್ಕೂ ಆಘಾತಕಾರಿ ಘಟನೆ. ಅಹಮದಾಬಾದ್-ಲಂಡನ್ ವಿಮಾನ ಪತನ ದುರ್ವಿಧಿ. ದುರಂತದಲ್ಲಿ ಸಾವನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆಂದು ಏರ್ ಇಂಡಿಯಾ ಚೇರ್ ಮನ್ ಚಂದ್ರಶೇಖರನ್ ಕಂಬನಿ ಮಿಡಿದಿದ್ದಾರೆ.
ದುರಂತವಾಗಿರುವ ಏರ್ ಇಂಡಿಯಾ ವಿಮಾನದಲ್ಲಿ 217 ಜನ ವಯಸ್ಕರರು ಪ್ರಯಾಣ ಬೆಳೆಸಿದ್ದರು. 11 ಮಕ್ಕಳು, 2 ಹಸುಗೂಸುಗಳ ಪ್ರಯಾಣದಲ್ಲಿದ್ದರು. 169 ಮಂದಿ ಭಾರತೀಯರು, ಓರ್ವ ಕೆನಡಾ ಪ್ರಜೆ, 52 ಬ್ರಿಟೀಷ್ ಪ್ರಜೆಗಳು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ವಿಮಾನವು 625 ಮೀಟರ್ ಎತ್ತರದಲ್ಲಿದ್ದಾಗ ಈ ದುರಂತ ಸಂಭವಿಸಿದೆ.