ಮುಂಬೈ: ಪತ್ನಿಯನ್ನು ತುಂಡು ಮಾಡಿ ಸೂಟ್ ಕೇಸ್ ಗೆ ತುಂಬಿದ್ದ ಕಿರಾತಕ ವಿಷ ಸೇವಿಸಿದ್ದಾನೆ ಎನ್ನಲಾಗಿದೆ.
ಆರೋಪಿ ರಾಕೇಶ್ ವಿಷ ಕುಡಿದು ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೀಗಾಗಿ ಆರೋಪಿ ಕರೆತರುವುದು ಅನುಮಾನವಾಗಿದೆ ಎನ್ನಲಾಗಿದೆ. ಪುಣೆ ಪೊಲೀಸರು ಆರೋಪಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಪತಿ ಹಾಗೂ ಪತ್ನಿಯ ಮಧ್ಯೆ ಜಗಳ ನಡೆದಿದೆ. ಈ ವೇಳೆ ಪತಿ ಮೇಲೆ ಹತ್ಯೆಯಾದ ಗೌರಿ ಚಾಕು ಎಸೆದಿದ್ದಳು. ಅದೇ ಚಾಕುವಿನಿಂದ ಪತ್ನಿಯ ಹತ್ಯೆ ಮಾಡಿ ಹೊಟ್ಟೆ, ಕತ್ತು ಕತ್ತರಿಸಿ ಸೂಟ್ ಕೇಸ್‍ಗೆ ತುಂಬಿದ್ದ ಎನ್ನಲಾಗಿದೆ.
ಪತ್ನಿಯ ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆಯಲ್ಲಿ ಊಟ ಮಾಡಿದ್ದ. ರಾತ್ರಿ 11ಕ್ಕೆ ಕಾರಿನಲ್ಲಿ ಮೃತದೇಹ ಸಾಗಿಸುವ ಪ್ಲ್ಯಾನ್ ಮಾಡಿದ್ದ. ಅದು ಯಶಸ್ಸು ಕಾಣತ ಹಿನ್ನೆಲೆಯಲ್ಲಿ ಬಾತ್ ರೂಮ್ ನಲ್ಲಿ ಇಟ್ಟು ಇಟ್ಟು ರಾಕೇಶ್ ಪರಾರಿಯಾಗಿದ್ದ.
ಹತ್ಯೆಯಾದ 16 ಗಂಟೆಗಳ ನಂತರ ಪಕ್ಕದ ಮನೆಯ ಬಾಡಿಗೆದಾರನಿಗೆ ಕರೆ ಮಾಡಿ, ವಿಚಾರ ಹೇಳಿದ್ದ. ನಂತರ ಮೃತಳ ಕುಟುಂಬಸ್ಥರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಆನಂತರ ವಿಷಯ ಮನೆಯ ಮಾಲೀಕರಿಗೆ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಆತನ ಸಿಡಿಆರ್ ಆಧರಿಸಿ ಹುಳಿಮಾವು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.