ಬೆಂಗಳೂರು: ರಿಸಲ್ಟ್ ತೋರಿಸುವ ಬರದಲ್ಲಿ ಶಿಕ್ಷಣ ಸಚಿವರು ಜನರನ್ನು ಯಾಮಾರಿಸಿದರಾ? ಎಂಬ ಆರೋಪ ಕೇಳಿ ಬಂದಿದೆ.
ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಓವರ್ ಆಲ್ ಪರ್ಸಂಟೇಜ್ ಪರಿಗಣನೆಗೆ ತೆಗೆದುಕೊಂಡರೆ ಶೇ. 69.16ರಷ್ಟು ಫಲಿತಾಂಶವಾಗುತ್ತದೆ. ಆದರೆ, ಸುದ್ದಿಗೋಷ್ಠಿಯಲ್ಲಿ ರಿಪಿಟರ್ಸ್ ಮತ್ತು ಖಾಸಗಿ ವಿದ್ಯಾರ್ಥಿಗಳ ಪರ್ಸಂಟೇಜ್ ಹೇಳದೇ ಸಚಿವರು ಕಳ್ಳಾಟವಾಡಿದರಾ? ಎಂಬ ಆರೋಪ ಕೇಳಿ ಬಂದಿದೆ.
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಹೊರ ಬಿದ್ದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 11.99 ರಷ್ಟು ಫಲಿತಾಂಶ ಕುಸಿತವಾಗಿದೆ. ಈ ಬಾರಿ ಶೇ. 69.16 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕಿಂತ (ಶೇ.81.15) ಶೇ.11.99 ರಷ್ಟು ಫಲಿತಾಂಶ ಕುಸಿತವಾಗಿದೆ.
ವಿದ್ಯಾರ್ಥಿವಾರು ಫಲಿತಾಂಶದಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳ ಫಲಿತಾಂಶ ಶೇ.11.14ರಷ್ಟು ಕುಸಿತಗೊಂಡಿದೆ. ಇದರೊಂದಿಗೆ ಖಾಸಗಿ ಹಾಗೂ ರಿಪೀಟರ್ಸ್ ಫಲಿತಾಂಶ ಕೂಡ ಕುಸಿತವಾಗಿದೆ. ಆದರೆ, ಒಟ್ಟಾರೆ ಫಲಿತಾಂಶ ಹೇಳಿ, ಹಲವಾರು ಅನುಮಾನಗಳಿಗೆ ಸಚಿವರು ದಾರಿ ಮಾಡಿಕೊಟ್ಟಿದ್ದಾರೆ.