ದರ್ಶನ್ ರನ್ನು ವಿಐಪಿ ಸೆಲ್ ನಲ್ಲಿ ಇಟ್ಟಿದ್ದಾರೆ. ನಾನು ಅವರನ್ನು ಬೇಟಿ ಆದೆ. ಅವರು ನನ್ನನ್ನು ತಬ್ಬಿಕೊಂಡರು. ಧ್ಯಾನ ಹೇಳಿಕೊಟ್ಟೆ. ಪುಸ್ತಕ ಓದುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಸ್ಥರನ್ನು ನೆನೆದು ಪಶ್ಚಾತ್ತಾಪ ಪಟ್ರು ಎಂಬೆಲ್ಲ ಹೇಳಿಕೆ ನೀಡಿದ್ದ ಮಾಜಿ ಕೈದಿ ಸಿದ್ದರೂಢಗೆ ಈಗ ಸಂಕಷ್ಟ ಎದುರಾಗಿದೆ.
ಈ ಕಾರಣಕ್ಕಾಗಿ ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದ ಸಿದ್ಧಾರೂಢಗೆ (Siddharoodha) ಸಂಕಷ್ಟವೊಂದು ಎದುರಾಗಿದೆ. ಇದನ್ನು ಗಮನಿಸಿದರೆ, ಸದ್ಯ ಜೈಲಿನಲ್ಲಿ ದರ್ಶನ್‌ರನ್ನು (Darshan) ಭೇಟಿಯಾಗಿದ್ದೇನೆ ಎಂದು ಸಿದ್ಧಾರೂಡ ಸುಳ್ಳು ಕಥೆ ಕಟ್ಟಿದ್ರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಸಿದ್ದಾರೂಢ ಈ ಹೇಳಿಕೆ ನೀಡಿದ್ದೆ ತಡ ಎಲ್ಲ ಮಾಧ್ಯಮಗಳು ಸಿದ್ದರೂಢನ ಸಂದರ್ಶನ ಮಾಡಿದ್ದವು. ಸಿದ್ದರೂಢ ಹೇಳಿಕೆ ಪ್ರಚಾರ ಪಡಿಸಿದ್ದವು. ಹೀಗಾಗಿಯೇ ಜೈಲಾಧಿಕಾರಿಗಳು ಇದನ್ನು ಪರಿಶೀಲಿಸಿ ನೋಟಿಸ್ ನೀಡಿದ್ದಾರೆ. ಜೈಲಿನ ಸಿಬ್ಬಂದಿ ಹೇಳಿದಂತೆ ಜೈಲಿನಲ್ಲಿ ದರ್ಶನ್ ಮತ್ತು ಸಿದ್ಧಾರೂಢ ಭೇಟಿ ಆಗಿಯೇ ಇಲ್ಲ. ನಟ ಭದ್ರತಾ ಸೆಲ್ ನಲ್ಲಿದ್ದು, ಭೇಟಿಗೆ ಯಾರಿಗೂ ಅವಕಾಶ ಕೊಡಲಿಲ್ಲ ಎಂದು ಜಿಲ್ಲಾಧಿಕಾರಿಗಳು ಕಾರಾಗೃಹ ಇಲಾಖೆಗೆ ರಿಪೋರ್ಟ್ ನೀಡಿದೆ.
ಜುಲೈ 8ರಂದು ಸಿದ್ಧಾರೂಢ ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಜೈಲಿನಲ್ಲಿ ಸಿದ್ಧರೂಢ ಇದ್ದಿದ್ದಾಗಿ ವರದಿಯಾಗಿದೆ. ಜು. 19ರಂದು ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ.
ಸಿದ್ದರೂಢ ಹೇಳಿಕೆ ಪರಿಗಣಿಸಿ ಎರಡೂ ಕಡೆಯ ಜೈಲಾಧಿಕಾರಿಗಳಿಗೆ ಕಾರಾಗೃಹ ಇಲಾಖೆ ನೋಟಿಸ್ ನೀಡಿತ್ತು. ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ. ದರ್ಶನ್‌ರನ್ನು ಅಲ್ಲಿ ನೋಡಿ ಬೇಜಾರಾಯಿತು ಎಂದು ಮಾತನಾಡಿದ್ದರು. ಜುಲೈ 8ರಂದು ಅಧಿಕಾರಿಗಳ ಅನುಮತಿ ಪಡೆದು ದರ್ಶನ್‌ರನ್ನು ಭೇಟಿಯಾದೆ. ನಿಮ್ಮ ಅಭಿಮಾನಿ ಅಂತ ಭೇಟಿಯಾದಾಗ ತಬ್ಬಿಕೊಂಡರು. ನಾನು ಪಿರಮಿಡ್ ಧ್ಯಾನ ಹೇಳಿಕೊಟ್ಟೆ. 10 ನಿಮಿಷ ಮಾಡಿದ ನಂತರ ಇದು ಒಂದು ಥರ ಚೆನ್ನಾಗಿದೆ ಕಂಟಿನ್ಯೂ ಮಾಡಬಹುದು ಎಂದು ದರ್ಶನ್ ಹೇಳಿದ್ದರು ಎಂದು ಸಿದ್ದರೂಢ ಹೇಳಿದ್ದ. ಈಗ ಈ ಹೇಳಿಕೆ ಸಿದ್ದಾರೂಢ ಕಟ್ಟಿರುವ ಕತೆ ಎಂದು ಪೊಲೀಸರು ಹೇಳಿದ್ದಾರೆ. ಯಾವುದು ಸತ್ಯಾ ಎಂಬುವುದನ್ನು ಕಾಯ್ದು ನೋಡಬೇಕಿದೆ.