ಬೆಂಗಳೂರು: ಕನಿಷ್ಠ ವೇತನ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಅಹೋರಾತ್ರಿ ಧರಣಿ (day-night protest) ನಡೆಸುತ್ತಿದ್ದು, ಇಂದು ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ (Freedom Park) ಕಳೆದ ಮೂರು ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರು. ಇಂದು ಕೂಡ ಪ್ರತಿಭಟನೆ ನಡೆಯುತ್ತಿತ್ತು. ಆದರೆ, ಪೊಲೀಸರು, ಮಧ್ಯೆ ಪ್ರವೇಶಿಸಿ ಇಲ್ಲಿ ಪ್ರತಿಭಟನೆ ಮಾಡಬಾರದು ಎಂದು ಹೋರಾಟ ಹತ್ತಿಕ್ಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಾಮಿಯಾನವನ್ನೂ ತೆಗೆಸಲಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸಿದ್ದರಾಮಯ್ಯ (Siddaramaiah) ನಮ್ಮ ಟೆಂಟ್ ತೆಗಿಸ್ತಿದ್ದೀಯಾ? ನಾವು ನಿನ್ನ ಸೀಟ್ ತೆಗೆಸ್ತೀವಿ” ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಗಾಡಿದ್ದಾರೆ.
ಪೊಲೀಸರು ನಾಳೆ ಪ್ರತಿಭಟನೆ ನಡೆಸಿದರೆ, ಎಫ್ ಐಆರ್ ಹಾಕುತ್ತೇವೆಂದು ಹೆದರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸರ್ಕಾರಕ್ಕೆ ಮಹಿಳೆಯರು ಕೂಡ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಇದುವರೆಗೂ ಯಾವುದೇ ಭರವಸೆ ನೀಡಿಲ್ಲ. ಆದರೆ ಪ್ರತಿಭಟನೆ ಹತ್ತಿಕ್ಕಲು ಯತ್ನಿಸುತ್ತಿದೆ. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂದು ಸರ್ಕಾರಕ್ಕೆ ವಾರ್ನಿಂಗ್ ಮಾಡಿದ್ದಾರೆ.