ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಪಕ್ಕಾ ಪ್ಲ್ಯಾನ್ ಮಾಡಿ ಹತ್ಯೆಗೆ ಸಂಚು ರೂಪಿಸಿರಬಹುದು ಎಂಬ ಅನುಮಾನ ಕೂಡ ಪೊಲೀಸರದ್ದಾಗಿದೆ.
ಪ್ರೊಫೆಷನಲ್ ಶಾರ್ಪ್ ಶೂಟರ್ ನಿಂದಲೇ ಅಟ್ಯಾಕ್ ಮಾಡಲಾಗಿದೆ ಎಂಬ ಅನುಮಾನದ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಲಿಸುತ್ತಿದ್ದ ಕಾರಿನ ಮೇಲೆ ಪಕ್ಕಾ ಗುರಿ ಇಟ್ಟು ದಾಳಿ ಮಾಡಿರಬಹುದು ಅಲ್ಲದೇ, ಪ್ರಿ ಪ್ಲ್ಯಾನ್ ಮಾಡಿ ರಿಕ್ಕಿ ರೈ ಮೇಲೆ ಅಟ್ಯಾಕ್ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ರಿಕ್ಕಿ ರೈ ಬಿಡದಿಯ ಮನೆಯಿಂದ ಬೆಂಗಳೂರಿಗೆ ತೆರಳುವ ಮಾಹಿತಿ ಕಲೆ ಹಾಕಿ ಅಟ್ಯಾಕ್ ಮಾಡಿರಬಹುದು. ರಸ್ತೆಯ ಬದಿಯ ಕಾಂಪೌಂಡ್ ನ ಹಿಂಬದಿ ಕುಳಿತು ಶಾರ್ಟ್ ಗನ್ ನಿಂದ ಗುಂಡಿನ ದಾಳಿ ನಡೆಸಿರಬಹುದು ಎಂಬುವುದು ಪೊಲೀಸರ ಅನುಮಾನವಾಗಿದೆ.
ಮುತ್ತಪ್ಪ ರೈ ಮನೆ ಬಿಡದಿ ಹೊರವಲಯದ ದೊಡ್ಡಮುದುವಾಡಿ ರಸ್ತೆಯಲ್ಲಿದೆ. ರಸ್ತೆಯಿಂದ ಒಂದು ಕಿ.ಮೀ ಒಳಗೆ ಮುತ್ತಪ್ಪ ರೈ ಮನೆ ಇದ್ದು, ಭದ್ರಕೋಟೆಯಂತಿದೆ. ಮನೆಗೆ ನುಗ್ಗಿ ಹೊಡೆಯುವುದು ಶತೃಗಳಿಗೆ ಕಷ್ಟ ಸಾಧ್ಯ. ಹೀಗಾಗಿ ಮನೆಯಿಂದ ಆಚೆ ಬರುವ ಸಮಯ ನೋಡಿಕೊಂಡು ಅಪರಿಚಿತ ವ್ಯಕ್ತಿ ಅಟ್ಯಾಕ್ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.



















