ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ್ ಆಂಡ್ ಗ್ಯಾಂಗ್ ಜೈಲು ಪಾಲಾಗಿದೆ. ಆದರೆ, ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಈಗ ಆಪ್ತೆ ಪವಿತ್ರಾ ಗೌಡ ಅವರ ಕೋಪವನ್ನು ಶಮನ ಮಾಡುವುದಕ್ಕಾಗಿ ಹತ್ಯೆ ನಡೆಯಿತು ಎಂಬುವುದು ಪೊಲೀಸ್ ಮೂಲಗಳಿಂದ ತಿಳಿದು ಬರುತ್ತಿದೆ.
ನಟ ದರ್ಶನ್ ಜೊತೆ ಆರೋಪಿ ಪವಿತ್ರಾ ಗೌಡ (Pavithra Gowda) ಇತ್ತೀಚೆಗೆ ಮುನಿಸಿಕೊಂಡಿದ್ದರು ಎನ್ನಲಾಗಿದೆ. ಪವಿತ್ರಾಗೌಡ ಕೋಟಿ ಮೌಲ್ಯದ ಕಾರು ಕೊಡಿಸುವಂತೆ ನಟ ದರ್ಶನ್ ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದೇ ದರ್ಶನ್ (Darshan) ಹಾಗೂ ಪವಿತ್ರಾ ಗೌಡ ನಡುವೆ ಮನಸ್ತಾಪವಾಗಿದ್ದ ವಿಚಾರವೊಂದು ಬಯಲಾಗಿದೆ.

ದರ್ಶನ್ ದುಬೈ ಟ್ರಿಪ್ ಮುಗಿಸುಕೊಂಡು ಬರುತ್ತಿದ್ದಂತೆ ಪವಿತ್ರಾ ಗೌಡ ಕೋಟಿ ಮೌಲ್ಯದ ಕಾರಿಗೆ ಬೇಡಿಕೆ ಇಟ್ಟಿದ್ದರಂತೆ. ಈ ಸಂದರ್ಭದಲ್ಲಿ ದರ್ಶನ್ ಕೋಟಿ ಕಾರು ಕೊಡಿಸುವುದಕ್ಕೆ ನಿರಾಕರಿಸಿದ್ದರು. ಸದ್ಯ ದೊಡ್ಡ ಅಮೌಂಟ್ ಇಲ್ಲ ಎಂದು ಕಾರಣ ನೀಡಿ ಪವಿತ್ರಾ ಗೌಡಗೆ ಕೋಟಿ ಕಾರು ಕೋಡಿಸುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಕಾರಣಕ್ಕೆ ಹಂತಕಿ ಪವಿತ್ರಾ ಗೌಡ ಆರೋಪಿ ದರ್ಶನ್ ಜೊತೆ ಮಾತು ಬಿಟ್ಟಿದ್ದರು. ಸುಮಾರು ಒಂದು ತಿಂಗಳುಗಳ ಕಾಲ ಪವಿತ್ರಾ ಗೌಡ ದರ್ಶನ್ ಜೊತೆ ಮಾತುಕತೆ ಇರಲಿಲ್ಲ. ಮಾತು ಬಿಟ್ಟಿದ್ದರ ನಡುವೆ ರೇಣುಕಾಸ್ವಾಮಿ ಮೆಸೆಜ್ ಪ್ರಕರಣ ದರ್ಶನ್ ಗೆ ಸಿಟ್ಟು ತರಿಸಿತ್ತು. ಈ ಪ್ರಕರಣವನ್ನು ಸುಖಾಂತ್ಯ ಮಾಡಿದರೆ, ಮತ್ತೆ ಹತ್ತಿರವಾಗಬಹುದು ಎಂಬ ಕಾರಣಕ್ಕೆ ದರ್ಶನ್ ಅಪಹರಿರಿಸಿ, ಕೊಲೆ ಮಾಡಿ ಈ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
