ಈ ವಾರ ಡಬಲ್ ಎಲಿಮಿನೇಶನ್ ಇರುತ್ತೆ ಅಂತ ಸ್ಪರ್ಧಿಗಳು ಯೋಚನೆ ಕೂಡ ಮಾಡಿರಲಿಲ್ಲ. ಆದ್ರೆ ಧ್ರುವಂತ್ ಅವರು ಎಲಿಮಿನೇಟ್ ಆಗ್ತಾರೆ ಅಂತ ಅಂದುಕೊಂಡಿದ್ದರು ಸ್ಪರ್ಧಿಗಳು. ಆದರೆ ಕೊನೆಗೆ ಆಗಿದ್ದೇ ಬೇರೆ. ರಕ್ಷಿತಾ ಅವರು ಮನೆಯಿಂದ ಆಚೆ ಹೋಗಿರೋದು ಕೆಲವು ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು. ಫಿನಾಲೆಗೆ ಹೋಗೋ ರಕ್ಷಿತಾ ಏಕಾಏಕಿ ಔಟ್ ಆಗ್ತಾರೆ ಅಂದ್ರೆ ಕೆಲವರಿಗೆ ನಂಬಲು ಅಸಾಧ್ಯವಾಗಿದೆ. ಇದೆಲ್ಲದರ ನಡುವೆ, ರಘುಗೆ ಒಂದು ಸುಳಿವು ಸಿಕ್ಕಿದೆ.
ಗಿಲ್ಲಿ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ‘ಇನ್ನೂ ಸೌಂಡ್ ಬಂದಿಲ್ಲ. ಏನೋ ಟ್ವಿಸ್ಟ್ ಇದೆ. ಪ್ರತಿ ಬಾರಿ ಈ ಸಮಯಕ್ಕೆ ತಕ್ಷಣ ಸೌಂಡ್ ಬರುತ್ತದೆ. ಬ್ಯಾಕ್ ಸ್ಟೇಜ್ ಇಂದ ಹೋಗಿ ಮಾತನಾಡಿಸುತ್ತಾರೆ. ಅವರ ವಿಟಿ ಹಾಕುತ್ತಾರೆ. ಜನರೆಲ್ಲ ಕೂಗಾಡುತ್ತಾರೆ. ಆದರೆ ಇವತ್ತು ಸ್ವಲ್ಪವೂ ಸೌಂಡ್ ಬಂದಿಲ್ಲ’ ಎಂದು ರಘು ಅವರು ಹೇಳಿದ್ದಾರೆ.
ರಘು ಅವರು ಹೇಳಿದ ಮಾತು ಕೇಳಿದ ಮೇಲೆ ಗಿಲ್ಲಿ ಅವರಿಗೂ ಹೌದು ಅನಿಸುತ್ತಿದೆ. ರಕ್ಷಿತಾ ವಾಪಸ್ ಬಂದಾಗ ಅವರೆಲ್ಲರೂ ಖುಷಿಪಡಲಿದ್ದಾರೆ. ಆದರೆ ಧ್ರುವಂತ್ ವಾಪಸ್ ಬರಬಾರದು ಎಂದು ರಜತ್ ಹೇಳಿದ್ದಾರೆ.
ಇನ್ನು ಸೀಕ್ರೆಟ್ ರೂಂನಲ್ಲಿ ಇದೆಲ್ಲವನ್ನು ನೋಡುತ್ತಿದ್ದಾರೆ ಧ್ರುವಂತ್ ರಕ್ಷಿತಾ, ರಘು, ಗಿಲ್ಲಿ ಮಾತಿಗೆ ರಕ್ಷಿತಾ ಭಾವುಕರಾಗುತ್ತಿದ್ದಾರೆ. ಆದರೆ ಧ್ರುವಂತ್ ಮಾತ್ರ ತಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿಕೊಳ್ಳುವವರ ನೋಡಿ ಕೋಪಗೊಂಡಿದ್ದಾರೆ.
ಇದನ್ನೂ ಓದಿ : ಮೆಕ್ಸಿಕೋದಲ್ಲಿ ಖಾಸಗಿ ಜೆಟ್ ಪತನ | 10 ಮಂದಿ ಮೃತಪಟ್ಟಿರುವ ಶಂಕೆ



















