ಬೆಂಗಳೂರು: ಮಾಜಿ ಡಿಜಿಐಜಿಪಿ ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರ ಮಧ್ಯಾಹ್ನ ಊಟ ಮಾಡುತ್ತಿರುವಾಗಲೇ ಓಂ ಪ್ರಕಾಶ್ ಕೊಲೆ ನಡೆದಿದೆ ಎನ್ನಲಾಗಿದೆ. ಡೈನಿಂಗ್ ಟೇಬಲ್ ಮೇಲೆ ಎರಡು ಮೀನು ತರಿಸಿಕೊಂಡು ಊಟಕ್ಕೆ ಕುಳಿತಿದ್ದ ವೇಳೆ ಪತಿ ಹಾಗೂ ಪತ್ನಿಯ ಮಧ್ಯೆ ಜಗಳ ನಡೆದಿದೆ. ಆಗ ಆರೋಪಿತೆ ಪಲ್ಲವಿ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.
ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದೆ. ಡೈನಿಂಗ್ ಹಾಲ್ ರಕ್ತಸಿಕ್ತವಾಗಿದೆ. ಡೈನಿಂಗ್ ಹಾಲ್ ನಲ್ಲೇ ಓಂಪ್ರಕಾಶ್ ಮೃತದೇಹ ರಕ್ತಸಿಕ್ತವಾಗಿ ಬಿದ್ದಿದೆ.
ಕೊಲೆ ಮಾಡಿದ ನಂತರ ತಾಯಿ-ಮಗಳು ಮೇಲಿನ ಮಹಡಿಯ ಕೋಣೆಗಳಿಗೆ ತೆರಳಿದ್ದಾರೆ. ನಂತರ ಪಲ್ಲವಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಪಾಟ್ ಗೆ ಹೋದಾಗ ಮಗಳು ಕೃತಿ ರಂಪಾಟ ಮಾಡಿದ್ದಾರೆ.
ಪೊಲೀಸರು ಬಂದಾಗ ಬಾಗಿಲು ತೆಗೆಯದೆ ಲಾಕ್ ಮಾಡಿಕೊಂಡಿದ್ದಾರೆ. ಆದರೆ, ಪಲ್ಲವಿ ತಾನೇ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ. ನಂತರ ಬಾಗಿಲು ಒಡೆದು ಪೊಲೀಸರು ಕೃತಿಯನ್ನು ವಶಕ್ಕೆ ಪಡೆದಿದ್ದಾರೆ. ಈಗ ತಾಯಿ ಹಾಗೂ ಮಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.



















